ಮಂಗಳೂರು: ಲಿಂಗ ಸಂವೇದನಾ ಘಟಕದ ವತಿಯಿಂದ ಯೆನೆಪೋಯ ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ) ದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಲಿಂಗ ಸಂವೇದನಾ ಘಟಕದ ಸಂಯೋಜಕರಾದ ಡಾ. ಲೀನಾ ಕೆ.ಸಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸೇರಿದ ಗಣ್ಯರನ್ನು ಸ್ವಾಗತಿಸಿದರು. ಸೆಲ್ ನ ಕಾರ್ಯದರ್ಶಿಯವರಾದ ಡಾ. ಗ್ಲಾಡೀಸ್ ಆರ್. ಕೊಲಾಸೋ 2022- 23 ರ ವರದಿ ವಾಚಿಸಿದರು. ಕಾರ್ಯಕ್ರಮದ ಗೌರವ ಅಥಿತಿಗಳಾದ ಡಾ. ಸುನಿತಾ ಸಲ್ಡಾನ್ಹಾ ರವರು ಸಮಾಜದಲ್ಲಿ ಲಿಂಗ ಸಂವೇದನೆ ಹಾಗೂ ಲಿಂಗ ಸಮಾನತೆಯ ಅಗತ್ಯೆಯ ಬಗ್ಗೆ ವಿಚಾರವನ್ನು ಮಂಡಿಸಿದರು. ವರ್ಷದ ಮಹಿಳಾ ಕಾರ್ಮಿಕ ಪ್ರಶಸ್ತಿಯನ್ನುಸುಮಾರು 27 ವರ್ಷ ತಮ್ಮ ಅಮೂಲ್ಯ ಸೇವೆಗಾಗಿ ಮಿಸ್ ಶಾಲಿನಿ ಎಂ. ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಸಿಸ್ಟರ್ ಶಾಂತಿ ಪ್ರಿಯರವರು ಸಮಾಜಮುಖಿ ಹಾಗೂ ಕೌಟುಂಬಿಕ ಸಮಾನತೆಯ ಅಗತ್ಯತೆಯ ಬಗ್ಗೆ ಗಮನ ಕೊಡುವುದು ಅತ್ಯಗತ್ಯವೆಂದು ಹೇಳಿದರು. ಡಾ. ಗುಲ್ಜಾರ್ ಅಹಮೆದ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನ ಗೌರವಕ್ಕೆ ಹಾಗೂ ಹಕ್ಕುಗಳಿಗೆ ಯೋಗ್ಯರು ಎಂದು ಪ್ರತಿವಾದಿಸಿದರು.
ಯೆನೆಪೋಯ ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ) ದ ಎಲ್ಲ ಅಂಗ ಸಂಸ್ಥೆಗಳು, ಗಣ್ಯರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ, ಲಿಂಗ ಸಂವೇದನಾ ಘಟಕದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಬಳಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಧನ್ಯವಾದ ಸಮರ್ಪಣೆ, ರಾಷ್ಟ್ರಗೀತೆ ಹಾಗೂ ವಿದ್ಯಾರ್ಥಿ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.