ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಲ್ಸ್ ಲಿಮಿಟೆಡ್ (ಎಂ.ಆರ್.ಪಿ.ಎಲ್) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಐಸಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಬರುವ ಪ್ರಮುಖ ಸಿಎಸ್ಐಆರ್ (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ) ಪ್ರಯೋಗಾಲಯ ದೊಂದಿಗೆ ಸಹಭಾಗಿತ್ವದ ಮೂಲಕ ಪ್ರಮುಖ ಸಂಶೋಧನಾ ಹೊಂದಾಣಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮಾರ್ಚ್ 7 ರಂದು ಹೈದರಾಬಾದ್ ನಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರಸಿಂಗ್ ಅವರ ಸಮ್ಮುಖದಲ್ಲಿ
ಒಡಂಬಡಿಕೆಗೆ ಸಹಿ ಹಾಕಲಾಯಿತು.
ಎಂ.ಆರ್.ಪಿ.ಎಲ್ ನ ನಿರ್ದೇಶಕರಾದ ( ಸಂಸ್ಕರಣೆ) ಸಂಜಯ್ ವರ್ಮಾ, ಸಿಎಸ್ಐಆರ್-ಐಐಸಿಟಿ ನಿರ್ದೇಶಕರಾದ ಡಾ. ಡಿ. ಶ್ರೀನಿವಾಸ ರೆಡ್ಡಿ, ಇತರೆ ಪ್ರಮುಖ ವಿಜ್ಞಾನಿಗಳು, ಕೈಗಾರಿಕಾ ವಲಯದ ಪ್ರಮುಖರು ಉಪಸ್ಥಿತರಿದ್ದರು. ಎಂ.ಆರ್.ಪಿ.ಎಲ್ ನ ಗ್ರೂಪ್ ಜನರಲ್ ಮ್ಯಾನೇಜರ್ (ತಾಂತ್ರಿಕ ಸೇವೆಗಳು) ಎಚ್.ಸಿ. ಸತ್ಯನಾರಾಯಣ ಮತ್ತು ಐಐಸಿಟಿಯ ಬಿಸಿನೆಸ್ ಡವಲಪ್ಮೆಂಟ್ ರೀಸರ್ಚ್ ಮ್ಯಾನೇಜ್ಮೆಂಟ್ (ಬಿಎಂಆರ್ ಡಿ) ಅಧ್ಯಕ್ಷ ಡಾ. ಡಿ. ಶೈಲಜಾ ಅವರು ಪ್ರಮುಖ ಸಂಶೋಧನಾ ಹೊಂದಾಣಿಕೆ (ಎಂಆರ್ ಎಎ) ಒಪ್ಪಂದಕ್ಕೆ ಸಹಿ ಹಾಕಿದರು.
ಎಂಆರ್ ಎಎ ಒಪ್ಪಂದದಡಿ ಎಂಆರ್ ಪಿಎಲ್ ಮತ್ತು ಐಐಸಿಟಿ ಹಲವಾರು ಪಾಲುದಾರಿಕೆಯ ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ಕಡಿಮೆ ಮೌಲ್ಯದ ಸಂಸ್ಕರಣಾಗಾರ ಸ್ಟೀಮ್ ಗಳ ಮೌಲ್ಯೀಕರಣ, ಸಿಒ2 ಕಾಪ್ಟರ್ ಮತ್ತು ಇತರೆ ಪರಿವರ್ತನೆ ವಲಯದಲ್ಲಿ ಕೆಲಸ ಮಾಡಲಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು 2070 ರ ವೇಳೆಗೆ ಈ ವಲಯದಲ್ಲಿ ನಿವ್ವಳ ಶೂನ್ಯ ಗುರಿ ಸಾಧಿಸುವ ಹಿನ್ನೆಲೆಯಲ್ಲಿ ಎಂಆರ್ ಪಿಎಲ್ ಹೆಜ್ಜೆ ಇಟ್ಟಿದೆ. ಇಂಗಾಲ ಸಂಗ್ರಹಿಸುವ ಮತ್ತು ಬಳಕೆಗಾಗಿ ಸ್ಪರ್ಧಾತ್ಮಕವಾಗಿ ದೇಶೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಎಂಆರ್ ಪಿಎಲ್ ಒತ್ತು ನೀಡಿದೆ.
ಸುಸ್ಥಿರ ಇಂಧನ ಉತ್ಪಾದನೆ ವಲಯದಲ್ಲಿ ಎಂಆರ್ ಪಿಎಲ್ ಪ್ರಮುಖ ಕ್ರಮ ತೆಗೆದುಕೊಂಡಿದೆ. ಇದರಲ್ಲಿ 60 ಕೆಎಲ್ ಪಿಡಿ ಸಾಮರ್ಥ್ಯದ ಫೀಡ್ -ಅಗ್ನೇಸ್ಟಿಕ್ 2ಜಿ ಎಥನಾಲ್ ಸ್ಥಾವರವನ್ನು ಸ್ಥಾಪಿಸುತ್ತಿದೆ. ಸಂಸ್ಕರಣೆಯೊಂದಿಗೆ ಸಂಯೋಜಿಸಲ್ಪಟ್ಟ 20 ಕೆಎಲ್ ಪಿಡಿ ಜೈವಿಕ ಎಟಿಎಫ್ ನಲ್ಲಿ ದೇಶದಲ್ಲೇ ಮೊದಲ ಸ್ಥಾವರವನ್ನು ಹೊಂದುವ ಪ್ರಕ್ರಿಯೆಯಲ್ಲಿದೆ. ತನ್ನ ಸಂಸ್ಕರಣಾಗಾರದಲ್ಲಿ ಎಂಆರ್ ಪಿಎಲ್ ಇತ್ತೀಚೆಗೆ ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಜೊತೆ ಜೈವಿಕ -ಎಟಿಎಫ್ ಸ್ಥಾಪನೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದೆ.