ಮಂಗಳೂರು: ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ಸಿಎಫ್ಎಎಲ್ ನ ಎಂಟು ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ರಾಜ್ಯ ವಿಜ್ಞಾನ ಒಲಂಪಿಯಾಡ್ ನಲ್ಲಿ ಸಾಧನೆ ಮಾಡಿದ್ದಾರೆ ಎಂದು ಸಿಎಫ್ಎಎಲ್ ನಿರ್ದೇಶಕ ವಿಜಯ್ ಮೋರಸ್ ತಿಳಿಸಿದ್ದಾರೆ.
ಮಂಗಳೂರಿನ ಸಿಎಫ್ಎಎಲ್ ಸಂಸ್ಥೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು ನಮ್ಮ ಸಂಸ್ಥೆಯ ವಿದ್ಯಾರ್ಥಿ ಮುರಳೀಧರ ರಾವ್ ಅಂತಾರಾಷ್ಟ್ರೀಯ ಗಣಿತ ಒಲಂಪಿಯಾಡ್ ಮತ್ತು ಅಂತಾರಾಷ್ಟ್ರೀಯ ಖಗೋಳ ಒಲಂಪಿಯಾಡ್ ನ ಎರಡನೇ ಹಂತದಲ್ಲಿ ತೇರ್ಗಡೆ ಹೊಂದುವ ಮೂಲಕ ಮಂಗಳೂರಿನಲ್ಲಿ ಈ ಸಾಧನೆಗೈದ ಏಕೈಕ ವಿದ್ಯಾರ್ಥಿ ಆಗಿದ್ದಾರೆ.
ಮಾತ್ರವಲ್ಲದೆ ಕೇತನ್ ಸುಮನ್ ಭಾರತೀಯ ರಾಷ್ಟ್ರೀಯ ರಸಾಯನ ಶಾಸ್ತ್ರ ಒಲಂಪಿಯಾಡ್ ರಾಷ್ಟ್ರೀಯ ಟಾಪ್ ೧ ಸ್ಥಾನ ಪಡೆದಿದ್ದಾರೆ. ಉಳಿದ ನಾಲ್ವರು ಸಿಎಫ್ಎಎಲ್ ವಿದ್ಯಾರ್ಥಿಗಳಾದ ಮುರಳೀಧರ್ ರಾವ್ ಎಂ, ಸುಮಂತ್ ಮಾರ್ಟಿಸ್, ಶಶಾಂಕ್ ಎಂ ಎನ್ ತಮ್ಮ ಸ್ಥಾನ ಗಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಭೌತಶಾಸ್ತ್ರ ಒಲಂಪಿಯಾಡ್ ರಾಜ್ಯದಲ್ಲಿ ಕ್ರಿಶ್ ವಿ ಶಾನ್ ಭಾಗ್ ಟಾಪ್ ಶೇ ೧ ಸ್ಥಾನ ಪಡೆದಿದ್ದಾರೆ. ಮೂರು ವಿದ್ಯಾರ್ಥಿಗಳಾದ ರಮೇಶ್ ಡಿ, ಆತ್ಮೀಯ ಕ್ಯಷಪ್, ನಿಯಮ್ ಶ್ಯಾಮ್ ಗಣಿತಶಾಸ್ತ್ರದಲ್ಲಿ ಇಂಡಿಯಾನ್ ಒಲಂಪಿಯಾಡ್ ಕ್ವಾಲಿಫಯರನ್ನು ತೇರ್ಗಡೆ ಹೊಂದಿದ್ದಾರೆ ಎಂದವರು ಹೇಳಿದರು. ಈ ವೇಳೆ ಸಿಎಫ್ಎಎಲ್ ಸಂಸ್ಥೆಯ ಪ್ರಾಂಶುಪಾಲ ಡಾ. ವಿನಿತ್, ಭೌತಶಾಸ್ತ್ರ ಪ್ರಾಧ್ಯಾಪಕ ಮಹೇಶ್, ಗಣಿತಶಾಸ್ತ್ರ ಪ್ರಾಧ್ಯಾಪಕ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.