ಮಂಗಳೂರು: ಯೆನೆಪೋಯ ದಂತ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಒಂದು ದಿನದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಮಾರ್ಚ್09 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ ಯೆನೆಪೋಯ ದಂತ ಮಹಾವಿದ್ಯಾಲಯದಲ್ಲಿ ಯಲ್ಲಿ ಆಯೋಜಿಸಿದ್ದರು.
ಪ್ರಾಂಶುಪಾಲ ಯೆನೆಪೋಯ ದಂತ ಮಹಾವಿದ್ಯಾಲಯ ಡಾ.ಲಕ್ಷ್ಮೀಕಾಂತ್ ಚಾತ್ರ ಕಾರ್ಯಕ್ರಮವನ್ನುಸಾಂಕೇತಿಕವಾಗಿ ಉದ್ಘಾಟಿಸಿದರು. ದಂತ ವೈದ್ಯ ವಿಭಾಗದ ಡೀನ್ ಡಾ.ಶಾಮ್ ಎಸ್ ಭಟ್ ಮತ್ತು ಕಾರ್ಯಕ್ರಮಾಧಿಕಾರಿ ಡಾ.ಇಮ್ರಾನ್ ಪಾಷಾ ಎಂ ಉಪಸ್ಥಿತರಿದ್ದರು.
ಒಟ್ಟು 130 ಫಲಾನುಭವಿಗಳು ಕಾರ್ಡ್ ಪಡೆದಿದ್ದಾರೆ. ಶ್ರೀಯುತ ಪ್ರಣಾಮ್ ಅವರೊಂದಿಗೆ ನೈಮಾ, ರಕ್ಷಿತಾ, ಜೈದ್, ತೌಸಿಲ್, ಡಾ.ಪ್ರವೀಣಾ, ಡಾ.ಕೃಷ್ಣಪ್ರಕಾಶ್, ಡಾ.ಹಿಫ್ಸು ಅವರ ತಂಡವು ಈ ಪ್ರಕ್ರಿಯೆಯಲ್ಲಿ ನೆರವಾಯಿತು.