ಮಂಗಳೂರು: ಮಿಲಾಗ್ರಿಸ್ ಕಾಲೇಜು ಮಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಸಂತ ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಚೇಳೂರಿನಲ್ಲಿ ಮಾರ್ಚ್ 10, 2023 ರಂದು ನೆರವೇರಿತು.
ಸಂತ ಥೋಮಸ್ ದೇವಾಲಯದ ಧರ್ಮಗುರುಗಳಾದ ವಂ ಗು ಮೈಕಲ್ ಡಿಸಿಲ್ವಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ದತೆ ಹಾಗೂ ಪರಿಪೂರ್ಣ ವ್ಯಕ್ತಿತ್ವ ವಿಕಸನದ ಕುರಿತು ಅರಿವು ಮೂಡಿಸಿದರು. ಸಜಿಪ ಪಡು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ವಿಠ್ಠಲ್ ದಾಸ್ ಅವರು ತಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಮಂಗಳೂರಿನ ಮಿಲಾಗ್ರಿಸ್ ವಿದ್ಯಾಸಂಸ್ಥೆಯ ಸಂಚಾಲಕರಾದ ವಂ ಗು ಬೋನವೆಂಚರ್ ನಜರೆತ್ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಶಿಬಿರಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂ ಗು ಮೈಕಲ್ ಸಂತುಮಾಯರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂತ ಥೋಮಸ್ ದೇವಾಲಯದ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರಾಬರ್ಟ್ ಡಿಸೋಜ ಹಾಗೂ ಕಾರ್ಯದರ್ಶಿಗಳಾದ ಲವೀನಾ ರೊಡ್ರಿಗಸ್ ಉಪಸ್ಥಿತರಿದ್ದರು.
ರಾ. ಸೇ.ಯೋಜನೆಯ ಯೋಜನಾಧಕಾರಿ ಕು ಶ್ರಾವ್ಯ ಏನ್ ಸ್ವಾಗತಿಸಿದರು. ಶಿಬಿರದ ನಾಯಕ ವಿನಿತ್ ಫರ್ನಾಂಡೀಸ್ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕಿ ಸುಶ್ಮಿತಾ ನಿರೂಪಿಸಿದರು. ಈ ವಾರ್ಷಿಕ ಶಿಬಿರದಲ್ಲಿ 51 ವಿದ್ಯಾರ್ಥಿಗಳು ಭಾಗವಾಗಿರುತ್ತಾರೆ.