ಯು.ಕೆ.ಮೋನು
ಹಾಜಿ ಯು.ಕೆ.ಮೋನು, ಮಂಗಳೂರಿನ ಕಣಚೂರ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು. ಸ್ಥಳೀಯ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಮತ್ತು ಹಿಂದುಳಿದವರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು 2002 ರಲ್ಲಿ ಅವರು ಕಣಚೂರ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸ್ಥಾಪಿಸಿದರು.
ಹಾಜಿ ಯು.ಕೆ ಮೋನು ಅವರು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಹಾಜಿ ಯು.ಕೆ ಮೋನು ಅವರ ವ್ಯಾಪಾರ ಉದ್ಯಮಗಳು ಅನೇಕ ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ಒದಗಿಸಿವೆ ಮತ್ತು ಇವರ ವ್ಯಾಪಾರ ಸಂಬಂಧಗಳು ಜಾಗತಿಕವಾಗಿ ವಿಸ್ತರಿಸಿವೆ.
ಅವರು ಸಹಾನುಭೂತಿಯುಳ್ಳ ವ್ಯಕ್ತಿಯಾಗಿ ಗುರುತಿಸಿಕೊಂಡಿರುವುದಲ್ಲದೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಆರ್ಥಿಕವಾಗಿ ಹಿಂದುಳಿದ ಅನೇಕ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಮತ್ತು ಉಚಿತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಾರೆ ಮತ್ತು ಬಡವರಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುತ್ತಿದ್ದಾರೆ.
ಸಾಮಾನ್ಯನಿಂದ ಅಸಾಧಾರಣ ಸಾಧನೆಗೆ ಏರಿದ ರಾಮಕೃಷ್ಣ ಆಚಾರ್, ಒಂದು ಸ್ಫೂರ್ತಿದಾಯಕ ಜೀವನ
ಜಿ ರಾಮಕೃಷ್ಣ ಆಚಾರ್ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದರು. ಕುಟುಂಬವನ್ನು ಪೋಷಿಸುವ ಕಾರಣಕ್ಕಾಗಿ ಅವರು ಶಿಕ್ಷಣ ತ್ಯಜಿಸಿ ಫ್ಯಾಬ್ರಿಕೇಶನ್ ವರ್ಕ್ಶಾಪ್ನಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕಾಯಿತು. ಆದರೆ ಕೆಲಸದಲ್ಲಿ ಕೌಶಲ್ಯಗಳನ್ನು ಕಲಿತುಕೊಂಡರು.
ಒಂದು ಶೆಡ್ನಲ್ಲಿ, ಕೇವಲ ರೂ. 25,000 ಬಂಡವಾಳದೊಂದಿಗೆ ವೃತ್ತಿ ಜೀವನ ಆರಂಭಿಸಿದ ಇವರು ಇಂದು ಫ್ಯಾಬ್ರಿಕೇಶನ್ ಕಂಪನಿಯನ್ನು ಹೊಂದಿದ್ದಾರೆ. ಇದು ಕೃಷಿ, ನೀರು ನಿರ್ವಹಣೆ ಮತ್ತು ಒಳಚರಂಡಿ ಸಂಸ್ಕರಣೆ ಕ್ಷೇತ್ರದಲ್ಲಿ ವರ್ಷಕ್ಕೆ ರೂ. 250 ಕೋಟಿಗಳಷ್ಟು ವಾರ್ಷಿಕ ವಹಿವಾಟು ಹೊಂದಿದೆ ಮತ್ತು 3000 ಕ್ಕೂ ಹೆಚ್ಚು ಜನರಿಗೆ ವಿವಿಧ ವಿಭಾಗಗಳಲ್ಲಿ ಉದ್ಯೋಗ ನೀಡಿದೆ. ಅವರು ಸುಮಾರು ರೂ. 100 ಕೋಟಿ ಮೊತ್ತದ ಮೂಲಸೌಕರ್ಯಗಳನ್ನು ನಿರ್ಮಿಸಿದ್ದಾರೆ.
ವಿಭಿನ್ನ ಸಂರಚನೆಯೊಂದಿಗೆ ಅವರ ‘ಎಲಿಕ್ಸಿರ್’ ಬ್ರಾಂಡ್ ವಾಟರ್ ಪ್ಯೂರಿಫೈಯರ್ ಈಗ ದೇಶದಾದ್ಯಂತ ಮತ್ತು ನೆರೆಯ ದೇಶಗಳಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ನೀರು ವಿತರಿಸಲು ಪ್ರಮಾಣಿತ ಸಾಧನವಾಗಿದೆ.
ರಾಮಕೃಷ್ಣ ಆಚಾರ್ ಅವರ ಮತ್ತೊಂದು ಕ್ಷೇತ್ರವೆಂದರೆ ತ್ಯಾಜ್ಯನೀರಿನ ಸಂಸ್ಕರಣೆ. ಜೊತೆಗೆ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಯತ್ನದಲ್ಲಿ ಅವರು ಕಾರ್ಕಳ ತಾಲೂಕಿನ ಕಾರ್ಕಳ ತಾಲೂಕಿನ ಮುನಿಯಾಲ್ನಲ್ಲಿ 35 ಎಕರೆ ಜಮೀನಿನಲ್ಲಿ ‘ಗೋ ಧಾಮ’ ಆರಂಭಿಸಿದ್ದಾರೆ. ಅವರು ಅವರದೇ ಸಮುದಾಯಕ್ಕೆ ಸಂಸ್ಕಾರದ ಅರಿವು ಮೂಡಿಸಲು ʼಬಾಲ ಸಂಸ್ಕಾರ ಕೇಂದ್ರʼವನ್ನು ಸಹ ಪ್ರಾರಂಭಿಸಿದ್ದಾರೆ.
ಪ್ರೊ.ಎಂ.ಬಿ ಪುರಾಣಿಕ್
ರಾಜ್ಯೋತ್ಸವ ಪುರಸ್ಕಾರ ಪುರಸ್ಕೃತರಾದ ಪ್ರೊ.ಎಂ.ಬಿ.ಪುರಾಣಿಕ್ ಅವರು ದೂರದೃಷ್ಟಿ, ಲೋಕೋಪಕಾರಿ, ಶಿಕ್ಷಣ ತಜ್ಞ, ವಾಣಿಜ್ಯೋದ್ಯಮಿ, ಸಮಾಜಸೇವಕ ಮತ್ತು ಭಾರತವೆಂಬ ರಾಷ್ಟ್ರೀಯವಾದಿ ಕಲ್ಪನೆಗೆ ಬದ್ಧರಾಗಿರುವ ರಾಜಕಾರಣಿ.
ಪ್ರೊ.ಎಂ.ಬಿ. ಪುರಾಣಿಕ್ ಅವರು ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಬೋಧನೆಯಲ್ಲಿ 34 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಆರಂಭದಲ್ಲಿ ಶಿರ್ವದ ಸೇಂಟ್ ಮೇರಿಸ್ ಜೂನಿಯರ್ ಕಾಲೇಜಿನೊಂದಿಗೆ ಮತ್ತು ನಂತರ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ದುಡಿದಿದ್ದಾರೆ. ಸಮಾಜ ಕಲ್ಯಾಣದಲ್ಲಿ ಆಸಕ್ತಿ ಹೊಂದಿರುವ ಎಂ.ಬಿ.ಪುರಾಣಿಕ್- ಸಮಾಜದಿಂದ ತೆಗೆದಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಹಿಂದಿರುಗಿಸಲು ಸಾಧ್ಯವಾಗುತ್ತದೆ ಎಂದು ಅವರು ನಂಬುತ್ತಾರೆ. ಕಳೆದ ಮೂವತ್ತು ವರ್ಷಗಳಲ್ಲಿ ಅವರು ನಾಲ್ಕು ವಿಭಿನ್ನ ಕ್ಯಾಂಪಸ್ಗಳಲ್ಲಿ 10 ಸಂಸ್ಥೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವರು ಮಂಗಳ ಸೇವಾ ಸಮಿತಿ ಟ್ರಸ್ಟ್ (ಬಾಲ ಸಂರಕ್ಷಣಾ ಕೇಂದ್ರ, ಕುತ್ತಾರ್ ಪದವು) ಎಂಬ ಅನಾಥಾಶ್ರಮದ ಅಧ್ಯಕ್ಷರಾಗಿದ್ದಾರೆ ಮತ್ತು ಪಜೀರ್ನಲ್ಲಿ 400 ಹಸುಗಳು ಮತ್ತು ಕೆಲವು ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡುವ ಗೋವನಿತಾಶ್ರಯ ಟ್ರಸ್ಟ್ ಅನ್ನು ಪ್ರಾರಂಭಿಸಿದರು. ಅವರು ಆರ್ಸಿಪಿಎಚ್ಡಿ ಟ್ರಸ್ಟ್ನ ಅಧ್ಯಕ್ಷರೂ ಆಗಿದ್ದಾರೆ. ಇದು ಆರ್ಥಿಕವಾಗಿ ವಂಚಿತರು ಮತ್ತು ದೈಹಿಕವಾಗಿ ವಿಕಲಾಂಗ ಮಕ್ಕಳಿಗಾಗಿ ಶಾಲೆಯನ್ನು ನಡೆಸುತ್ತಿದೆ. ಅವರ ಪರೋಪಕಾರಿ ನಾಯಕತ್ವದಿಂದಾಗಿ, ಪ್ರತಿ ವರ್ಷ ಸುಮಾರು 100 ವಿದ್ಯಾರ್ಥಿಗಳು ಉಚಿತ ಶಿಕ್ಷಣವನ್ನು ಪಡೆಯುತ್ತಾರೆ ಮತ್ತು ಇದುವರೆಗೆ 21 ಅನಾಥ ಹುಡುಗಿಯರು ವಿವಾಹವಾಗಿದ್ದಾರೆ.