ಬೆಳ್ತಂಗಡಿ: ಕಳೆದ ಎಪ್ಪತ್ತು ವರ್ಷಗಳಿಂದ ಆಡಳಿತ ನಡೆಸಿದ ಸರಕಾರಗಳು ಜನ ಸಾಮಾನ್ಯರ ಕಷ್ಡಗಳಿಗೆ ಸ್ಪಂದಿಸದೆ ಅವರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ. ಎತ್ತಿನ ಹೊಳೆ ಯೋಜನೆಯಂತ ಅನೇಕ ಉಪಯೋಗಕ್ಕೆ ಬಾರದ ಯೋಜನೆಗಳನ್ನು ತಂದು ಜನರ ತೆರಿಗೆ ಹಣವನ್ನು ಪೋಲುಮಾಡುವ ಸರಕಾರಗಳಿಂದ ರಾಜ್ಯ ದೀವಾಳಿಯಾಗುತ್ತಿದೆ. ಬೆಳ್ತಂಗಡಿಯಲ್ಲು ಕೆಲವು ಬಡಜನರ ಕಾರ್ಯಗಳು ಜಾರಿಯಾಗದೆ ನೆನೆಗುದಿಗೆ ಬಿದ್ದಿದ್ದು ಇದೀಗ ರೈತ ಸಂಘ ಜಾಗೃತರಾದ ಕಾರಣ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷ ಅದಿತ್ಯ ನಾರಾಯಣ ರಾವ್ ಕೊಲ್ಲಾಜೆ ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಲ್ಲಗುಡ್ಡೆ ಬಳಿ 1.5 ಕೋಟಿ ವೆಚ್ಚದ ಟ್ರಿ ಪಾರ್ಕ್ ನಿರ್ಮಿಸಿ ಜನರಿಗೆ ಉಪಯೋಗಕ್ಕೆ ಕೊಡದೆ ಬೀಗ ಹಾಕಿದ್ದಾರೆ.ಇದೀಗ ರೈತ ಸಂಘ ಸ್ಥಳಕ್ಕೆ ಬೇಟಿ ನೀಡಿ ಸತ್ಯಾಸತ್ಯತೆ ತಿಳಿದು ಸಾಮಾಜಿಕ ಜಾಲಾತಾಣದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತಂದ ಬಳಿಕ ಅದಿಕಾರಿಗಳು ಗೇಟು ತೆರೆದಿದ್ದಾರೆ.
ಅದೇ ರೀತಿ ಅದರ ಪಕ್ಕದಲ್ಲೆ ಪ ಜಾತಿ ಪ ಪಂಗಡದವರಿಗೆ 4.5 ಎಕ್ರೆ ಜಾಗ ಮೀಸಲಿಟ್ಟಿದ್ದು ಅದನ್ಬು ಈ ಕುಟುಂಬಗಳಿಗೆ ನೀಡದೆ ಅನ್ಯಾಯ ಮಾಡಿದ್ದಾರೆ.ಇದನ್ನು ರೈತ ಸಂಘ ಎಚ್ಚರಿಸಿದಾಗ ಇದೀಗ ಮಾ 23 ಕ್ಕೆ ಹಕ್ಕು ಪತ್ರ ನೀಡಲು ದಿನ ನಿಗದಿ ಮಾಡಿದ್ದಾರೆ ಎಂದರು. ಅಲ್ಲದೆ ಕಳೆದ ಎಂಟು ವರ್ಷದಲ್ಲಿ ತಾಲೂಕಿನಲ್ಲಿ 37500 ಅಕ್ರಮ ಸಕ್ರ ಅರ್ಜಿ ಬಂದಿದ್ದು ಇದರಲ್ಲಿ ಕೇವಲ 700 ಅರ್ಜಿ ವಿಲೇವಾರಿ ಅಗಿದೆ. ಇದೆಲ್ಲ ಸರಿಯಾಗಿ ಜನರಿಗೆ ಸಿಗಲು ರೈತ ಸಂಘ ಜನರೊಂದಿಗೆ ಇರಲಿದ್ದು ಇದಕ್ಕಾಗಿ ತಾಲೂಕಿನಲ್ಲಿ ಅಭಿಯಾನ ನಡೆಸಲಿದೆ ಎಂದರು.
ಇತ್ತಿಚೆಗೆ ಸರಕಾರ ಮಂಜೂರು ಮಾಡದ 400 ಕೋಟಿ ಕಾಮಗಾರಿಯ ಶಿಲಾನ್ಯಾಸದ ಬಗ್ಗೆ ಜನರಿಗೆ ನೈಜ ಮಾಹಿತಿ ತಿಳಿಸುವ ಪ್ರಯತ್ನ ಮಾಡಲಾಗುವುದು. ಜನ ಇದರಿಂದ ಮೋಸ ಹೋಗುತ್ತಿದ್ದಾರೆ ಎಂದರು. ತಾಲೂಕಿನ ಜನ ಪ್ರತಿನಿದಿಯೋರ್ವರು ಮಡಿಕೆರಿ ಸುತ್ತ ಮುತ್ತ 300 ಎಕರೆಗು ಅದಿಕ ಜಾಗ ಖರೀದಿಸಿದ್ದು ಇದನ್ನು ದಾಖಲೆ ಸಹಿತ ಜನರ ಮುಂದೆ ಇಡಲಿದ್ದೇವೆ ಎಂದರು. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ತಾಲೂಕಿನ ಸಮುದಾಯ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದು, ಗ್ರಾಮ ಗ್ರಾಮದಲ್ಲಿ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದರು. 60 ವರ್ಷ ಮೇಲ್ಪಟ್ಟವರಿಗೆ ಪಿಂಚನಿ ಸೌಲಭ್ಯ, ಕಾರ್ಮಿಕರಿಗೆ ವಿಮಾ ಸೌಲಭ್ಯ ಇನ್ನಿತರ ನೊಂದವರ ಸೇವೆಗೆ ರೈತ ಸಂಘ ಶ್ರಮಿಸಲಿದೆ ಎಂದರು.
ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಕೊಯ್ಲ,ತಾಲೂಕು ಅದ್ಯಕ್ಷ ಅವಿನಾಶ್, ಕಾರ್ಯದರ್ಶಿ ದೇವಪ್ಪ ನಾಯ್ಕ್ ಉಪಸ್ಥಿತರಿದ್ದರು.