ಮಂಗಳೂರು: ಮಂಗಳೂರಿನ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಕಮ್ಯೂನಿಟಿ ಮೆಡಿಸಿನ್ ವಿಭಾಗದ ವತಿಯಿಂದ ೩ನೇ ಡಾ. ಬಿ.ಎಸ್. ಸಜ್ಜನ್ ದತ್ತಿ ಉಪನ್ಯಾಸ ಕಾರ್ಯಕ್ರಮದಡಿಯಲ್ಲಿ ಈಗ ಮತ್ತು ಮುಂದಿನ ಭವಿಷ್ಯದಲ್ಲಿ ಸಾರ್ವಜನಿಕ ಆರೋಗ್ಯ ಎಂಬ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ನಡೆಯಿತು.
ಮಂಗಳೂರಿನ ಲೈಟ್‌ಹೌಸ್ ಹಿಲ್ ರಸ್ತೆಯ ಕೆಎಂಸಿ ಎಮ್‌ಇಯು ಎವಿ ಸಭಾಂಗಣದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಕಮ್ಯೂನಿಟಿ ಮೆಡಿಸನ್ ವಿಭಾಗದ ಮಾಜಿ ಡೀನ್ ಮತ್ತು ಪ್ರೊಪೇಸರ್ ಡಾ. ಆರ್. ಎಸ್. ಫಣೀಂದ್ರ ರಾವ್ ಅವರು ಈಗ ಮತ್ತು ಮುಂದಿನ ಭವಿಷ್ಯದಲ್ಲಿ ಸಾರ್ವಜನಿಕ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು.
ಮಣಿಪಾಲ್ ಅಕಾಡೆಮಿ ಹೈಯರ್ ಎಜ್ಯುಕೇಶನ್‌ನ ಪ್ರೊ. ವಯ್ಸ್ ಚಾನ್ಸಲರ್ ಡಾ. ದಿಲಿಪ್ ನಾಯಕ್ ಅವರು ಮಾತನಾಡಿ, ೩ನೇ ಡಾ. ಬಿ.ಎಸ್. ಸಜ್ಜನ್ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದೇವೆ. ಕಮ್ಯೂನಿಟಿ ಮೆಡಿಸಿನ್ ವಿಭಾಗದಿಂದ ಹಮ್ಮಿಕೊಂಡಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಆನಂತರ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ. ಬಿ. ಉನ್ನಿಕೃಷ್ಣನ್ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಆರ್. ಎಸ್. ಫಣೀಂದ್ರ ರಾವ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆರ್ಗನೈಸಿಂಗ್ ಚೇರ್‌ಪರ್ಸನ್ ಡಾ. ರೇಖಾ ಟಿ, ಮತ್ತು ಆರ್ಗನೈಸಿಂಗ್ ಸೆಕ್ರೆಟ್ರಿ ಡಾ. ಪ್ರಸನ್ನ ಮಿತ್ರ ಪಿ ಉಪಸ್ಥಿತರಿದ್ದರು.