ಪುತ್ತೂರು: ಪುತ್ತೂರು ನಗರಸಭಾ ಸದಸ್ಯ ಶಿವರಾಮ್ ಸಪಲ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಕೃತ್ಯ ಎಸಗಿದ್ದು, ಪತ್ನಿ ಫೋನ್ ಮಾಡುವ ವೇಳೇ ಫೋನನ್ನು ಪತಿ ಸ್ವೀಕರಿಸಲಿಲ್ಲ.
ಈ ವೇಳೆ ಹತ್ತಿರದ ಮನೆಯವರಿಗೆ ಮನೆಗೆ ತೆರಳಿ ನೋಡುವಂತೆ ಹೇಳಿದ್ದಾರೆ. ಆಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ. ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಶಿವರಾಮ್ ಸಪಲ್ಯ ಊರಮಾಲು ನಿವಾಸಿಯಾಗಿದ್ದು, ಪುತ್ತೂರು ನಗರಸಭಾ ಸದಸ್ಯರಾಗಿದ್ದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.