ಬಂಟ್ವಾಳ : ದಿ ಟೈಮ್ಸ್ ಗ್ರೂಪ್ ನಿಂದ ಕೊಡಲ್ಪಡುವ ಪ್ರತಿಷ್ಠಿತ ಟೈಮ್ಸ್ ಬ್ಯುಸಿನೆಸ್ ಆವಾರ್ಡ್ -೨೦೨೩ಕ್ಕೆ ಪ್ರಶಸ್ತಿಗೆ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ರವರ ಮಾಲಕತ್ವದ ಮೈಸೂರಿನ ಎಸ್ಎಲ್‌ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಯ್ಕೆಯಾಗಿದೆ.
ಪ್ರಶಸ್ತಿಯನ್ನು ಮಾ.೧೪ರಂದು ಮೈಸೂರಿನ ಸೈಂಟ್ ಶೋರ್ ರೆಸಾರ್ಟ್ ಸ್ಪಾನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ
‘ಬೆಸ್ಟ್ ಎಜ್ಯುಕೇಶನಲ್ ಬುಕ್ ಸಪ್ಲೈ ಅವಾರ್ಡ್’ಅನ್ನು ಸಂಸ್ಥೆಯ ಮಾಲಕರಾದ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ್ ದಾಸ್ ನೇರ್ಲಾಜೆ ಹಾಗೂ ಅವರ ಪತ್ನಿ ಹೇಮಾವತಿ ದಿವಾಕರ ದಾಸ್ ರವರು ಪಡೆದುಕೊಂಡರು. ಖ್ಯಾತ ನಟಿ ರಾಶಿ ಖನ್ನಾರವರು ಪ್ರಶಸ್ತಿ ಪ್ರದಾನ ಮಾಡಿದರು. ಟೈಮ್ಸ್ ಗ್ರೂಪ್ಸ್ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಂತೆ ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಈ ಪ್ರಶಸ್ತಿ ಲಭಿಸಿದೆ.
ದಿವಾಕರದಾಸ್ ನೇರ್ಲಾಜೆಯವರು ಮಾಲಕತ್ವದಲ್ಲಿರುವ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಳೆದ ಹಲವಾರು ವರುಷಗಳಿಂದ ಶಾಲಾಕಾಲೇಜುಗಳ ಪುಸ್ತಕ ಮಾರಾಟದಲ್ಲಿ ತನ್ನದೇ ಆದೆ ರೀತಿಯಲ್ಲಿ ಮುನ್ನಡೆಯುತ್ತಿದ್ದು ರಾಜ್ಯದಲ್ಲೇ ನಂಬರ್ ೧ ಸ್ಥಾನದಲ್ಲಿದೆ. ಉಳಿದಂತೆ ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಎಸ್.ಎಲ್.ವಿ. ಬುಕ್ಸ್ ಏಜೇನ್ಸೀಸ್ ರಿಟೈಲ್ ಔಟ್ಲೇಟ್ ಅನ್ನು ಹೊಂದಿ ಜನಮನ್ನಣೆ ಗಳಿಸಿದೆ.