ಮಂಗಳೂರು: ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ನಡೆಯು ತ್ತಿರುವ ಪ್ರತಿಭಟನೆ ಮುಂದುವರಿದಿದ್ದು ಮಂಗಳೂರಿನಲ್ಲಿ ಸ್ವಚ್ಚತಾ ಕಾರ್ಮಿಕರು ಮುಷ್ಕರ ಕೈಗೊಂಡಿದ್ದಾರೆ. ಪರಿಣಾಮವಾಗಿ ಮಂಗಳೂರು ನಗರದಲ್ಲಿಯೂ ಹಲವು ದಿನಗಳಿಂದ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ. ಪರಿಣಾಮ, ಕಸದ ರಾಶಿ ಮನೆಬಾಗಿಲಿನಲ್ಲಿದೆ. ಅನೇಕ ರಸ್ತೆ ಓಣಿಗಳಲ್ಲಿ ರಾಶಿ ಬಿದ್ದ ಕಸ ಕೊಳೆತು ನಾರುತ್ತಿದೆ.
ಪಾಲಿಕೆಯ ಒಳಚರಂಡಿ ಕಾರ್ಮಿ ಕರು, ಎಸ್‌ಟಿಪಿ ಆಪರೇಟರ್ ಗಳು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿರುವುದರಿಂದ ನಗರದಲ್ಲಿ ಕೆಲವು ದಿನಗಳಿಂದ. ಒಳಚರಂಡಿ ಸಮಸ್ಯೆ ಬಹುವಾಗಿ ಕಾಡಲಾರಂಬಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಶುಕ್ರವಾರ ಎಸ್. ಟಿಪಿ ಮತ್ತು ಒಳಚರಂಡಿ ಕಾರ್ಮಿಕರ ಮನವೊಲಿಸಲು ಸಭೆ ನಡೆಸಿದ್ದಾರೆ. ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆದು ಕೆಲಸ ಆರಂಭಿಸುವುದಾಗಿ ಒಪ್ಪಿಕೊಂಡಿದ್ದಾರೆ.
ಇಂದು ಮೇಯರ್ ಸಭೆ: ಪಾಲಿಕೆಯ ಒಳಚರಂಡಿ ಕಾರ್ಮಿಕರು, ಎಸ್‌ಟಿಪಿ ಆಪರೇಟರ್‌ಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮೇಯರ್ ಜಯಾನಂದ ಅಂಚನ್ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಲಿದೆ.