News Kannada
Wednesday, March 22 2023

ಮಂಗಳೂರು

“ಶಿವದೂತೆ ಗುಳಿಗೆ” ನಾಟಕದ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡಿದ ಗೃಹ ಸಚಿವ ವಿರುದ್ಧ ಆಕ್ರೋಶ

Home Minister slams Home Minister for making derogatory remarks on 'Shivdoote Pill' drama
Photo Credit : News Kannada

ಮಂಗಳೂರು: ತುಳು ಭಾಷೆಯಲ್ಲಿ ಮೂಡಿಬಂದ ಶಿವದೂತೆ ಗುಳಿಗೆ ಎಂಬ ಅಮೋಘ ನಾಟಕದ ಬಗ್ಗೆ ಗೃಹ ಸಚಿವ ಆರಗ
ಜ್ಞಾನೇಂದ್ರ ಅಪಮಾನಕಾರಿ ಹೇಳಿಕೆ ನೀಡಿದ್ದಾರೆ. ಗುಳಿಗೆ, ಗುಳಿಗೆ ಎಂದು ಏನೇನೋ ಮಾತಾಡಿದ್ದು ನಾಟಕವನ್ನು ಕಾಂಗ್ರೆಸ್ ಪ್ರಚಾರಕ್ಕೆ ಬಳಸಿಕೊಂಡಿದೆ ಎಂದೆಲ್ಲ ಹೇಳಿದ್ದಾರೆ. ನಾಟಕ ನೋಡಲು ಜನ ಸೇರಿದ್ದಾರೆ ಅಂತ ತುಳುವರು ನಂಬುವ ದೈವದ ಬಗ್ಗೆ ಅವಹೇಳನಕಾರಿ ಮಾತನಾಡೋದಾ.. ಜ್ಞಾನೇಂದ್ರ ಅವರಿಗೆ ಚುನಾವಣೆಯಲ್ಲಿ ಸೋಲುತ್ತೇನೆಂಬ ಹೆದರಿಕೆ ಹುಡ್ಕೊಂಡಿದೆ. ಹಾಗಾಗಿ ಏನೇನೋ ತಡಬಡಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಟೀಕಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈಗಾಗಲೇ ರೈತರಿಗೆ ಅಡಿಕೆ ಬೆಳೀಬೇಡಿ ಅಂತ ಹೇಳಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ರೈತರು ತಿರುಗಿ ಬಿದ್ದಿದ್ದು ಇವರು ಮಾತ್ರ ಅಡಿಕೆ ಬೆಳೆಯೋದಾ ಎಂದು ಸಿಟ್ಟಾಗಿದ್ದಾರೆ. ಇವರು ಪಿಎಸ್‌ಐ ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ನಿಂತು ಏನೂ ಆಗಿಯೇ ಇಲ್ಲ ಎಂದಿದ್ದರು. ಆದರೆ 15 ದಿನದಲ್ಲಿ ಪೊಲೀಸ್ ಅಧಿಕಾರಿಯೇ ಅರೆಸ್ಟ್ ಆಗಿದ್ದರು.

ಮೊನ್ನೆ ಸಿಟಿ ರವಿಯವರು ಶಿವ, ರಾಮ, ಕೃಷ್ಣ ಎಲ್ಲ ದೇವರುಗಳೂ ಬಿಜೆಪಿಯವರೇ ಎಂದು ಹೇಳಿದ್ದರು. ದೇವರನ್ನೂ ಇವರ ರಾಜಕೀಯ ಲಾಭಕ್ಕೆ ಬಳಸಿಕೊಳ್ತಿದಾರೆ. ಹಿಂದೊಮ್ಮೆ ಹೆಬ್ರಿಯಲ್ಲಿ ಡಿಕೆಶಿಗೆ ಅಭಿಮಾನಿಗಳು ಖಡಲೆ ಕೊಟ್ಟಾಗ, ಇದು ದೈವಕ್ಕೆ ಅವಮಾನ ಎಂದು ಬಿಜೆಪಿಯ ದಯಾನಂದ ಕತ್ತಲ್ಪಾರ್ ಹೇಳಿದ್ದರು. ಆಮೇಲೆ ಇವರೇ ದೈವದ ಮುಖವಾಡವನ್ನು ಪಡೆದಿದ್ದರು. ಇದು ದೈವಕ್ಕೆ ಅಪಚಾರ ಆಗೋದಿಲ್ಲವೇ. ಇವರು ಮಾಂಸ ತಿಂದು ದೇವಸ್ಥಾನ ಹೋಗಬಹುದು, ಪೂಜೆ ಮಾಡಬಹುದು. ಮೊನ್ನೆ ಸಿಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದರ ವಿಡಿಯೋ ಬಂದಿತ್ತು. ಸಿದ್ದರಾಮಯ್ಯ ಹೋಗಬಾರದು ಎಂದು ವಿವಾದ ಮಾಡುತ್ತಾರೆ. ಇವರೆಲ್ಲ ಹೇಳುವುದು ಒಂದು, ಮಾಡೋದು ಇನ್ನೊಂದು ಎಂಬಂತಾಗಿದೆ.

ಕಾಂಗ್ರೆಸ್ ಗ್ಯಾರಂಟಿ ಕೊಡುಗೆ ಎಲ್ಲರಿಗೂ ಗೊತ್ತಿದೆ. ನಾಡಿದ್ದು ಬೆಳಗಾವಿಯಲ್ಲಿ ಯುವ ಸಂಗಮ ಸಮಾವೇಶ ಮಾಡುತ್ತಿದ್ದೇವೆ. ಅದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯುವಕರಿಗೆ ಗ್ಯಾರಂಟಿ ಕೊಡಲಿದ್ದಾರೆ. ಕಾಂಗ್ರೆಸ್ ಭರವಸೆಯನ್ನು ಜನ ನಂಬುತ್ತಾರೆ, ಯಾಕಂದ್ರೆ, ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ತಾವು ಕೊಟ್ಟ ಭರವಸೆಗಳನ್ನು ಈಡೇರಿಸಿತ್ತು. ಇವತ್ತು ಹಿಂದಿನ ಸರ್ಕಾರಗಳ ಆಡಳಿತದ ತುಲನೆಯಾಗುತ್ತಿದೆ, ಯಾವುದು ಒಳ್ಳೆದು ಅಂತ ಹೇಳಿ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ. ಮಸೀದಿಯಲ್ಲಿ ದೇವಸ್ಥಾನದ ಕುರುಹು ಹುಡುಕುತ್ತಿದ್ದಾರೆ, ಅದನ್ನು ಮುಂದಿಟ್ಟು ಜಾತಿ ಧರ್ಮದ ಭೇದ ಮಾಡುತ್ತಾರೆ, ನಂಜನಗೂಡಿನಲ್ಲಿ ರಾತ್ರೋರಾತ್ರಿ ದೇವಸ್ಥಾನ ಒಡೆದು ಹಾಕಿದ್ದರು, ಪುತ್ತೂರಿನಲ್ಲಿ ಹತ್ತು ವರ್ಷಗಳ ಹಿಂದೆ ದೇವಸ್ಥಾನದ ವಿಗ್ರಹ ಕಳವಾಗಿತ್ತು ವಿಹಿಂಪದ ಐದು ಜನ ಕಾರ್ಯಕರ್ತರು ಬಂಧನ ಆಗಿದ್ದನ್ನು ಪತ್ರಿಕೆಯಲ್ಲಿ ನೋಡಿದ್ದೇವೆ. ಇವರ ಸಂಸ್ಕಾರ, ದೈವಭಕ್ತಿ ನಿರ್ದಿಷ್ಟ ಕೆಲಸಕ್ಕೆ ಮಾತ್ರ. ಮನಸ್ಸಿನಲ್ಲಿ ಭಕ್ತಿ ಇಲ್ಲ. ಮೊನ್ನೆ ಖಾದರ್ ಅಧಿವೇಶನದಲ್ಲಿ ತುಳು ಬಗ್ಗೆ ಮಾತು ಎತ್ತಿದಾಗ ಕಾನೂನು ಸಚಿವ ಮಾಧುಸ್ವಾಮಿ ಗೇಲಿ ಮಾಡಿದ್ದರು. ಇಲ್ಲಿನ ಶಾಸಕರು ಯಾರಾದ್ರೂ ತುಳು ಪರವಾಗಿ ಮಾತನಾಡಿದ್ದರೇ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

See also  ಸರಕಾರಿ ಪ್ರೌಢಶಾಲೆ ಶಿಕ್ಷಕಿ ಆತ್ಮಹತ್ಯೆ ಯತ್ನ, ಚಿಕಿತ್ಸೆ ಫಲಕಾರಿಯಾಗದೆ ಸಾವು

ಕೆಎಸ್ಸಾರ್ಟಿಸಿ ರೂಟನ್ನು ಖಾಸಗಿಯವರಿಗೆ ಮಾಡಿಕೊಡಲು 50 ಕೋಟಿ ಡೀಲ್ ಮಾಡ್ತಿದ್ದಾರೆಂದು ವದಂತಿ ಇದೆ. ಇದೇ ಮಾ.24 ರ ಒಳಗೆ ಮಾಡಬೇಕು ಮಸೂದೆ ತರಬೇಕು ಎಂದಿದ್ದಾರೆ. ಕೆಎಸ್ಸಾರ್ಟಿಸಿ ನಷ್ಟದಿಂದ ಮುಚ್ಚುವ ಹಂತಕ್ಕೆ ತಂದಿಟ್ಟಿದ್ದಾರೆ. ಇದೊಂದು ಕರಾಳ ಮಸೂದೆಯಾಗಿದ್ದು ಯಾರದ್ದೋ ಲಾಭಕ್ಕಾಗಿ ರಾಮುಲು ಕೆಎಸ್ಸಾರ್ಟಿಸಿ ಬಲಿ ಕೊಡಬಾರದು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು