ಮಂಗಳೂರು: ಪಾಲಿಕೆ ಒಳಚರಂಡಿ ಕಾರ್ಮಿಕರು, ಎಸ್‌ಟಿಪಿ ಆಪರೇಟರ್‌ಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಶನಿವಾರ ಪಾಲಿಕೆಯಲ್ಲಿ ನಡೆದ ಸಭೆ ವಿಫಲವಾಗಿದ್ದು, ಎಸ್‌ಟಿಪಿ ನೌಕರರು, ವೆಟ್‌ವೆಲ್ ಕಾರ್ಮಿಕರು ಮತ್ತೆ ಪ್ರತಿಭಟನೆ ಮುಂದುವರಿಸಿದ್ದಾರೆ.
ನೇರಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಕೆಲ ಬೇಡಿಕೆ ಇರಿಸಿದ್ದು, ಇದು ಈಡೇರುವ ತನಕ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಬಿಗಡಾಯಿಸಿದ ಸಮಸ್ಯೆ: ಸ್ಟೇಟ್‌ಬ್ಯಾಂಕ್, ಗೂಡ್ಸ್‌ಶೆಡ್, ಬಂದರು, ರೈಲ್ವೇ ಸ್ಟೇಶನ್ ರಸ್ತೆ, ಬಂದರು, ಡೊಂಗರಕೇರಿ ಮೊದಲಾದ ಪ್ರದೇಶಗಳಲ್ಲಿ ಕಸದ ಬೃಹತ್ ರಾಶಿ ನಿರ್ಮಾಣವಾಗಿದ್ದು, ಹಸಿಕಸ, ಒಣಕಸ ವಿಲೇವಾರಿಯಾಗದೇ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ.