News Kannada
Wednesday, June 07 2023
ಮಂಗಳೂರು

ಬಂಟ್ವಾಳ: ವಿಟ್ಲ ಹೋಬಳಿ 94 ಸಿ ಹಕ್ಕು ಪತ್ರ ವಿತರಣೆ

94C Title Deed Issue
Photo Credit : News Kannada

ಬಂಟ್ವಾಳ: ವಿಟ್ಲ ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ 94 ಸಿ ಹಕ್ಕು ಪತ್ರ ಮತ್ತು ಅಕ್ರಮ ಸಕ್ರಮ ಸಿಟ್ಟಿಂಗ್ ವಿಟ್ಲದ ಶ್ರೀನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಜನರಿಗೆ ಮಣ್ಣಿನ ಬಗ್ಗೆ ಕಾಳಜಿ ಇದೆ. ಹೆಚ್ಚಿನ ಜನರು ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಲೂ ಇನ್ನೂ ಅವಕಾಶ ಇದೆ. ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವು ಕಾನೂನು ತೊಡಕುಗಳಿಂದ 12 ಸಾವಿರ ಅರ್ಜಿಗಳು ಬಾಕಿ ಇದೆ. 300 ಜನರಿಗೆ ಸಾಗುವಳಿ ಚೀಟಿ, ಇನ್ನೂ ಕೆಲವರಿಗೆ ಹಕ್ಕು ಪತ್ರ ನೀಡಲಾಗಿದೆ ಎಂದರು.

ತಹಶೀಲ್ದಾರ್ ಸತೀಶ್ ಬಿ.ಕೂಡಲಗಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಪುರುಷೋತ್ತಮ ಮುಂಗ್ಳಿಮನೆ, ಪರಮೇಶ್ವರಿ ಬಿ. ಉಪಸ್ಥಿತರಿದ್ದರು.‌

ಗ್ರಾಮ ಕರಣಿಕ ಅನಿಲ್ ಸ್ವಾಗತಿಸಿದರು. ಉಪತಹಸೀಲ್ದಾರ್ ವಿಜಯವಿಕ್ರಮ್ ಎನ್.ರಾಜೇಶ್ ನಾಯ್ಕ , ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ, ಬಂಟ್ವಾಳ ತಾಲೂಕು ಕಚೇರಿ ವಿಷಯ ನಿರ್ವಾಹಕರಾದ ಗ್ರೇಟ್ಟಾ ಮಸ್ಕರೇನ್ಹಸ್, ವಿಶು ಕುಮಾರ್, ಚಂದ್ರಕಲಾ ಪೆರ್ನೆ, ಕೃತಿಕಾ ಪುಣಚ, ವಿನುತಾ ಕೇಪು ಸಹಕರಿಸಿದರು. ಇದೇ ಸಂದರ್ಭದಲ್ಲಿ 27 ಫಲಾನುಭವಿಗಳಿಗೆ 94ಸಿ ಮತ್ತು 60 ಫಲಾನುಭವಿಗಳಿಗೆ 94ಸಿಸಿ ಮತ್ತು 9 ಮಂದಿ ಕೃಷಿಕರಿಗೆ ಸಾಗುವಳಿ ಚೀಟಿ ವಿತರಣೆ ಮಾಡಲಾಯಿತು. ಬಳಿಕ ಅಕ್ರಮ ಸಕ್ರಮ ಸಮಿತಿಯ ಬೈಠಕ್ ನಡೆಯಿತು.

See also  ಮಂಗಳೂರು: ರಾಷ್ಟ್ರೀಯ  ಮಟ್ಟದಲ್ಲಿ ೩ನೇ ಸ್ಥಾನ ಪಡೆದ ಶಕ್ತಿ ಪದವಿ ಪೂರ್ವ ಕಾಲೇಜಿನ ಕಬ್ಬಡಿ ತಂಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು