ಮಂಗಳೂರು: ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಸದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿರುವುದನ್ನು ಖಂಡಿಸಿ, ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸುತ್ತಿರುವ ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಸಂಜೆ 7ಗಂಟೆಗೆ ಲಾಲ್‌ಭಾಗ್ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್, ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಬುಡಮೇಲು ಮಾಡುವ ಕೃತ್ಯವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಪ್ರಪಂಚದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಸಂವಿಧಾನವಿರುವ ಭಾರತದಲ್ಲಿ ಕ್ಷುಲ್ಲಕ ಕಾರಣಗಳಿಗೆ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ಗಮನಿಸಿದರೆ ಬಿಜೆಪಿ ಕುತಂತ್ರ ತಿಳಿಯುತ್ತದೆ. ರಾಹುಲ್ ಗಾಂಧಿ ಮಾಡಿದ ತಪ್ಪಾದರೂ ಏನು ಈ ದೇಶದಲ್ಲಿ ಕಳ್ಳರನ್ನು ಕಳ್ಳರು ಎಂದು ಹೇಳುವುದು ತಪ್ಪೇ. ಅದಾನಿ ಸಮೂಹ ಲಕ್ಷಾಂತರ ಕೋಟಿ ರೂ.ಗಳನ್ನು ಲೂಟಿ ಹೊಡಿದಿರುವುದನ್ನು ಪ್ರಶ್ನಿಸುವುದು ತಪ್ಪೇ? . ದೇಶದ ಜನಸಾಮಾನ್ಯರ ತೆರಿಗೆ ಹಣವನ್ನು ಮೆಹೂಲ್ ಚೋಕ್ಸಿ, ನೀರವ್ ಮೋದಿ , ಲಲಿತ್ ಮೋದಿ ಅಂತವರು ಲೂಟಿ ಮಾಡಿದ್ದಾರೆ. ಅದನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದಲ್ಲಿರುವ ಪ್ರತಿ ಪ್ರಜೆಗಳ ಕರ್ತವ್ಯ ಎಂದರು. ಈ ನಿಟ್ಟಿನಲ್ಲಿ ದೇಶದಲ್ಲಿರುವ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಹೇಳಿರುವ ಹೇಳಿಕೆಯನ್ನು ಪುನರುಚ್ಚರಿಸುತ್ತೇವೆ. ನಮ್ಮನ್ನೆಲ್ಲ ಬಂಧಿಸಲಿ ಎಂದು ಸವಾಲೆಸೆದರು.
ವಿಧಾನ ಪರಿಷತ್ ವಿರೋಧಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಯು ಟಿ ಖಾದರ್, ಕೆ ಹರೀಶ್ ಕುಮಾರ್, ಅಭಯ ಚಂದ್ರ ಜೈನ್, ಐವನ್ ಡಿ ಸೋಜಾ, ಜೆ ಆರ್ ಲೋಬೊ, ಶಕುಂತಲಾ ಶೆಟ್ಟಿ, ಮೊಯಿದಿನ್ ಭಾವ, ಶಶಿಧರ್ ಹೆಗ್ಡೆ, ಲುಕ್ಮನ್ ಬಂಟ್ವಾಳ್, ಶಾಲೆಟ್ ಪಿಂಟೋ, ವಿಶ್ವಾಸ್ ದಾಸ್, ನವೀನ್ ಡಿ ಸೋಜಾ, ಪುರೊಸೋತ್ತಮ ಚಿತ್ರಪುರ, ಸಾವಾದ್ ಸುಳ್ಯ, ಜೋಕಿಮ್ ಡಿ ಸೋಜಾ,ಉಮೇಶ್ ದಂಡಿಕೇರಿ, ಲಾರೆನ್ಸ್ ಡಿ ಸೋಜಾ, ಸಂತೋಷ್ ಶೆಟ್ಟಿ, ಅಬ್ದುಲ್ ರವೂಫ್, ಲಾಂನ್ಸಿ ಲಾಟ್ಟೋ ಪಿಂಟೋ, ಅಪ್ಪಿ, ರಮಾನಂದ ಪೂಜಾರಿ, ಎ ಸಿ ವಿನಾಯರಾಜ್, ಪ್ರತಿಭಾ ಕುಳಾಯಿ,ಮುಹಮ್ಮದ್ ಬಡಗನ್ನೂರ್, ಡಾ. ರಾಜಾರಾಮ್, ಪ್ರವೀಣ್ ಅಲ್ವಾ, ಸದಾಶಿವ ಶೆಟ್ಟಿ, ಆಶೀತ್ ಪಿರೇರ, ರೆಹಮನ್ ಕುಂಜತ್ಬೈಲ್ ಆಳ್ವಿನ್ ಪ್ರಕಾಶ್, ಮಂಜುಳಾ ನಾಯಕ್, ಶಾಂತಲಾ ಗಟ್ಟಿ, ಟಿ ಹೊನ್ನಯ್ಯ, ದೀಪಕ್ ಪೂಜಾರಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಾಕೇಶ್ ದೇವಾಡಿಗ, ಸ್ಟಾನಿ ಆಲ್ವೇರೀಶ್ ಮೊದಲಾದವರು ಉಪಸ್ಥಿತರಿದ್ದರು.