ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಮತ್ತೊಂದು ಮಹತ್ವದ ಆದೇಶವನ್ನು ಹೊರಡಿಸಿದೆ. ಸುಳ್ಯದಲ್ಲಿ ಇರುವ ಪಿಎಫ್‌ಐ ಕಚೇರಿಯನ್ನು ಜಪ್ತಿ ಮಾಡುವುದಕ್ಕೆ ಆದೇಶ ನೀಡಿದೆ.
ತಾಹಿರಾ ಕಾಂಪ್ಲೆಕ್ಸ್ ಮೊದಲನೇ ಮಹಡಿ ಅಲೆಟ್ಟಿ ರೋಡ್ ಗಾಂಧಿ ನಗರ ಸುಳ್ಯ ಇಲ್ಲಿ ಪಿಎಫ್‌ಐ ಕಚೇರಿಯನ್ನು ಹೊಂದಿತ್ತು. ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಸುಳ್ಯದ ಪಿಎಫ್‌ಐ ಕಚೇರಿಯನ್ನು ಎನ್‌ಐಎ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ನಿಷೇಧಿತ ಸಂಘಟನೆಯ ಕಚೇರಿಯನ್ನು ಬಂದ್ ಮಾಡಿಸಬೇಕು ಅನ್ನುವ ಕೂಗು ಹೆಚ್ಚಿತ್ತು. ಈ ಬೆನ್ನಲ್ಲೇ ಎನ್‌ಐಎ ಕಚೇರಿಯನ್ನು ಜಪ್ತಿ ಮಾಡಿರುವುದು ವಿಶೇಷವಾಗಿದೆ.