ಮಂಗಳೂರು: ಅಡ್ಯಾರ್‌ನಲ್ಲಿರುವ ಐಸ್‌ಕ್ರೀಂ ದಾಸ್ತಾನು ಕೇಂದ್ರಕ್ಕೆ ಬೆಂಕಿ ಬಿದ್ದು ಅಪಾರ ನಷ್ಟವಾಗಿದೆ. ಮುಂಜಾನೆ ಎರಡು ಗಂಟೆವೇಳೆಗೆ ಬೆಂಕಿ ಬಿದ್ದಿದ್ದು, ಕೋಟ್ಯಂತರ ರೂ. ನಷ್ಟವಾಗಿದೆ. ವಾಹನ ಸೇರಿದಂತೆ ಸ್ಥಳದಲ್ಲಿದ್ದ 5 ಕೋಟಿ ರೂ . ಮೌಲ್ಯದ ವಸ್ತುಗಳು ನಾಶವಾಗಿವೆ.
ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಕಾರವಾರದಿಂದ ಕಾಸರಗೋಡಿನವರಿಗೆ ನಂದಿನಿ ಐಸ್‌ಕ್ರೀಂ ವಿತರಿಸುವ ಘಟಕ ಇದಾಗಿದೆ. ರಾತ್ರಿ 2 ಗಂಟೆ ವೇಳೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿದ್ದು, ದಾಸ್ತಾನು ಕೇಂದ್ರದ ಮೇಲೆ ನಂದಿನಿ ಐಸ್‌ಕ್ರೀಂ ವಿತರಕರ ಮನೆ ಇದ್ದು, ಬೆಂಕಿ ಹತ್ತಿಕೊಂಡಿರುವ ವಿಷಯ ಅವರಿಗೆ ಮೊದಲಿಗೆ ತಿಳಿದುಬಂದಿದೆ. ಅವರು ಕೆಳಗಡೆ ಮಲಗಿದ್ದ ವಾಹನ ಚಾಲಕರು, ಮತ್ತು ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಎಚ್ಚರಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ರೆಫಿಜರೇಟರ್ ಹೊಂದಿರುವ ವಾಹನ ಬೆಂಕಿಗಾಹುತಿ: ದುರ್ಘಟನೆ ವೇಳೆ ಐಸ್‌ಕ್ರೀಂ ಸಾಗಾಟಕ್ಕೆ ಬಳಸುತ್ತಿದ್ದ ರೆಫ್ರಿಜರೇಟರ್ ಹೊಂದಿರುವ ವಾಹನ ಬೆಂಕಿಗಾಹುತಿಯಾಗಿದೆ. ದಾಸ್ತಾನು ಕೇಂದ್ರದ ಒಳಗಡೆ ಇದ್ದ ಬೃಹತ್ ರೆಫ್ರಿಜರೇಟರ್, ನಂದಿನಿ ಐಸ್‌ಕ್ರೀಂ ಸಂಗ್ರಹ ಬೆಂಕಿಗೆ ಆಹುತಿಯಾಗಿದೆ.