ಬಂಟ್ವಾಳ: ೨೦೨೨ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರು ಆಯ್ಕೆಯಾಗಿದ್ದಾರೆ.
ಗಂಭೀರ ಪ್ರಕರಣಗಳ ತನಿಖೆ ಹಾಗೂ ಪತ್ತೆ ಕಾರ್ಯದಲ್ಲಿ ಸಮಗ್ರವಾಗಿ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ನಾಗರಾಜ್ ರವರನ್ನು ಆಯ್ಕೆ ಮಾಡಲಾಗಿದೆ. ೨೦೦೭ನೇ ಬ್ಯಾಚ್ ನ ಪಿಎಸ್ ಐ ಅಗಿರುವ ಹೆಚ್.ಈ. ನಾಗರಾಜ್ ರವರು ಆರಂಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರೋಬೆನರಿ ತರಬೇತಿ ಮುಗಿಸಿ ಚಿಕ್ಕಮಂಗಳೂರು ತರಿಕೆರೆ ಪೊಲೀಸ್ ಠಾಣೆಯಲ್ಲಿ ಎಸ್.ಐ. ಆಗಿ ಕರ್ತವ್ಯ ಆರಂಭಿಸಿದ್ದರು. ಆ ಬಳಿಕ ಕಡಬ, ಬಂಟ್ವಾಳ ಗ್ರಾಮಂತರ, ಪುತ್ತೂರು ಸಂಚಾರ, ವಿಟ್ಲ, ವೇಣೂರು ಠಾಣೆಯಲ್ಲಿ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿ ಅಲ್ಲಿಂದ ಇನ್ಸ್ ಪೆಕ್ಟರ್ ಆಗಿ ಭಡ್ತಿ ಹೊಂದಿ ಭಟ್ಕಳ ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.
ಆ ಬಳಿಕ ಮೆಲ್ದರ್ಜೆಗೇರಿದ್ದ ವಿಟ್ಲ ಪೊಲೀಸ್ ಠಾಣೆಗೆ ಪ್ರಥಮ ಇನ್ಸ್ ಪೆಕ್ಟರ್ ಆಗಿ ಆಗಿಮಿಸಿ, ಇದೀಗ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಧಕ್ಷ ಪೊಲೀಸ್ ಅಧಿಕಾರಿಯಾಗಿರುವ ಹೆಚ್.ಈ. ನಾಗರಾಜ್ ರವರು ಹಲವಾರು ಕಠಿಣ ಪ್ರಕರಣಗಳನ್ನು ಬೇಧಿಸುವಲ್ಲಿ ಸಫಲರಾಗಿದ್ದರು ಮಾತ್ರವಲ್ಲದೆ ಎಲ್ಲರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದರು. ನಾಗರಾಜ್ ರವರು ಮೂಲತಃ ಹಾಸನ ಜಿಲ್ಲೆಯವರಾಗಿದ್ದಾರೆ.