News Kannada
Saturday, June 03 2023
ಮಂಗಳೂರು

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ರಜತ ಮಹೋತ್ಸವ ಮತ್ತು ನೂತನ ಕಟ್ಟಡ ಉದ್ಘಾಟನೆ

Silver Jubilee celebration and inauguration of new building of Sri Lakshmanananda Multipurpose Co-operative Society
Photo Credit : News Kannada

ಮಂಗಳೂರು: ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಇದರ ಬೆಳ್ಳಿಹಬ್ಬ ಸಂಭ್ರಮಾಚರಣೆ ಅಂಗವಾಗಿ ನಿರ್ಮಿಸಿದ ಸಂಘದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮವನ್ನು ಡಾ| ಎಂ. ಎನ್, ರಾಜೇಂದ್ರ ಕುಮಾರ್ ಅಧ್ಯಕ್ಷರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್,ನಿ ಮಂಗಳೂರು ನೆರವೇರಿಸಿದರು.

ಸೇಫ್ ಲಾಕರ್ ಅನ್ನು ಡಾ.ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು. ಸಮಾರಂಭ ವನ್ನು ಮೇಯರ್ ಜಯಾನಂದ ಅಂಚನ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡುತ್ತಾ, ಸಂಸ್ಥೆ ಮಂಗಳೂರಿನ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ. ಸಾಕಷ್ಟು ಬಡ ಕುಟುಂಬಗಳಿಗೆ, ಸಾಲ ನೀಡಿ ಉತ್ತಮ ಸೇವೆ ನೀಡಿದೆ.

ಜೊತೆಗೆ ಸಂಸ್ಥೆ ಮುಂದಕ್ಕೆ ಉತ್ತಮ ಸಂಸ್ಥೆಯಾಗಿ ರಾಜ್ಯ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅದ್ಯಕ್ಷರು ಕೃಷ್ಣ ಜೆ. ಪಾಲೆಮಾರ ಮಾತನಾಡುತ್ತಾ, ಸಂಘದ ನೂತನ ಕಟ್ಟಡ ಆಗಬೇಕೆಂದು ಸರ್ವ ಸದಸ್ಯರ ಆಶಯವಾಗಿತ್ತು ಅಲ್ಲದೆ ಸ್ಮರಣೀಯ ರೀತಿಯ ಕಟ್ಟಡ ವಾಗಿರಬೇಕು ಎನ್ನುವ ಆಶಯ ಆಗಿತ್ತು. ಇದಕ್ಕೆ ನಮ್ಮ ಎಲ್ಲಾ ಸದಸ್ಯರು ಸಹಕಾರ ಮಾಡಿದ್ದಾರೆ ಅನ್ನುವುದು ಸಂತೋಷದ ವಿಷಯವಾಗಿದೆ.ಸದಸ್ಯರು 20% ಡಿವಿಡೆಂಡ್ ಅನ್ನು ನೀಡಿದ್ದು ವಿಶೇಷವಾಗಿದೆ.

ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಡಿ. ವೇದವ್ಯಾಸ ಕಾಮತ್, ಮಹಾಬಲೇಶ್ವರ ಎಂ. ಎಸ್‌. ಆಡಳಿತ ನಿರ್ದೇಶಕರು, ಕರ್ನಾಟಕ ಬ್ಯಾಂಕ್, ಜೆ. ಆರ್. ಲೋಬೊ, ಮಾಜಿ ಶಾಸಕರು, ಮಾತನಾಡುತ್ತಾ ಹಿರಿಯರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ, ಇಂದು ಸಂಘದ ಸದಸ್ಯರು 25ವರ್ಷದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿದ್ದಾರೆ. ಮುಂದಕ್ಕೆ ಸಂಸ್ಥೆ ಶತಮಾನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಅಥಿತಿ, ಡಾ. ಶಾಂತರಾಮ ಶೆಟ್ಟಿ, ಮಾತನಾಡಿ,ಸಂಸ್ಥೆ ರಾಮ ಕ್ಷತ್ರಿಯ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ, ಉಜ್ವಲ ಆಗಿ ಬೆಳೆದು 400ಕೋಟಿ ಗಿಂತಲೂ ಹೆಚ್ಚು ವ್ಯವಹಾರ ನಡೆಸಿ, ರಿಕ್ಷಾ ಚಾಲಕರಿಗೆ, ಸಣ್ಣ ಸಣ್ಣ ಉದ್ದಿಮೆದಾರರಿಗೆ ಸಹಾಯ ಹಸ್ತ ನೀಡಿ ಉತ್ತಮ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆ ಇಂದು ಸಾವಿರಾರು ಮಂದಿಗೆ ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.

ಡಾ.ರಾಜೇಂದ್ರ ಕುಮಾರ್ ಮಾತನಾಡುತ್ತಾ ಸಂಸ್ಥೆ ಕಟ್ಟುವುದು ಸುಲಭ, ನಡೆಸುವುದು ಕಷ್ಟ,2 ಸಾವಿರದಿಂದ 3ಸಾವಿರ ಜನ ರಿಕ್ಷಾ ಚಾಲಕರಿಗೆ ಸಾಲ ನೀಡಿ ಅವರನ್ನು ಸ್ವಂತ ಮಾಲಕರನ್ನಾಗಿ ಮಾಡಿದ ಸಂಸ್ಥೆಗೆ ಅಭಿನಂದನೆ.ಸಂಸ್ಥೆಗೆ ವೈಯಕ್ತಿಕವಾಗಿ 5ಲಕ್ಷ ರೂಪಾಯಿ ಚೆಕ್ ಅನ್ನು ನೀಡಿದರು.

ಸಮಾರಂಭದಲ್ಲಿ ಲಕ್ಷ್ಮಣಾನಂದ ಸಹಕಾರ ಸಂಘದ ಸ್ಥಾಪಕ ಪ್ರವರ್ತಕರನ್ನು, ಠೇವಣಿದಾರರನ್ನು,ಕಟ್ಟಡ ನಿರ್ಮಾಣ ಕರ ಪ್ರವೀಣ್ ರನ್ನು, ಸಂಘದ ನಿರ್ದೇಶಕರನ್ನು, ಮತ್ತು ಎಂ.ಎನ್.ರಾಜೇಂದ್ರ ಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ನಿರ್ದೇಶಕ ಮಂಡಳಿ ಸರ್ವಶ್ರೀಗಳಾದ : ರಾಮಚಂದ್ರ ಕೆ.ಎಸ್, ಜೆ.ಕೆ. ರಾವ್, ಪಿ. ಬಾಬು, ಬ್ಯಾಂಕಿನ ಸಿ ಇ ಒ, ಶಿವ ಪ್ರಸಾದ್, ಡಾ| ಜೆ. ರವೀಂದ್ರ, ಕೆ.ಎಸ್, ರಂಜನ್, ವಾರಿಜಿ ಕೆ. ಡಾ| ಹೆಚ್. ಪ್ರಭಾಕರ್, ಡಾ. ಮಂಜುಳ ಎ. ರಾವ್, ಕೆ. ರವೀಂದ್ರ, ಜೈರಾಜ್ ಕೆ. ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

See also  ಬೆಂಗಳೂರು: ಹೊಸದಾಗಿ ನಿರ್ಮಿಸಲಾದ ಶಾಲಾ ತರಗತಿಗಳಿಗೆ ಸ್ವಾಮಿ ವಿವೇಕಾನಂದರ ಹೆಸರು ಇಡಲು ನಿರ್ಧಾರ

ಸಂಧ್ಯಾ ದಿನೇಶ್ ರವರು ಪ್ರಾಥನೆಗೈದು, ದಿನೇಶ್ ರಾವ್,ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮನೋಹರ್ ಪ್ರಸಾದ್ ನಿರೂಪಿಸಿದರು. ಜೆ. ಕೆ.ರಾವ್ ಧನ್ಯವಾದ ಅರ್ಪಿಸಿದರು.

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಬಗ್ಗೆ

ದುಡಿಯುವ ಮನಸ್ಸು ಮತ್ತು ಸಾಧಿಸುವ ಛಲ ಇರುವ ಸಾವಿರಾರು ಕಿರು ಕಸುಬುದಾರರಿಗೆ ನೆರವಿನ ಹಸ್ತಚಾಚುವ ಮೂಲಕ ಜನಸಾಮಾನ್ಯರಿಗೂ ಬದುಕು ಕಟ್ಟುವ ಭರವಸೆ ನೀಡಿದ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಇದೀಗ ರಜತ ಮಹೋತ್ಸವ ಸಂಭ್ರಮದಲ್ಲಿದೆ. ಸಮಾಜದ ಉನ್ನತಿ ಮತ್ತು ಸಾಮಾನ್ಯ ಜನರಿಗೆ ಆರ್ಥಿಕ ನೆರವು ನೀಡುವ ಮಹತ್ತರ ಉದ್ದೇಶದಿಂದ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರ ಮಾರ್ಗದರ್ಶನದಲ್ಲಿ ೧೯೯೭ರ ಡಿಸೆಂಬರ್ ೭ರಂದು ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ)ವನ್ನು ಸ್ಥಾಪಿಸಲಾಯಿತು. ೧೯೯೭ರಲ್ಲಿ ಕೇವಲ ೩ ಲಕ್ಷ ರೂ. ಮೂಲ ಬಂಡವಾಳದೊಂದಿಗೆ ೯ ಜನ ನಿರ್ದೇಶಕರು ಮತ್ತು ೮೦೦ ಶೇರುದಾರರೊಂದಿಗೆ ಆರಂಭಗೊಂಡ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಇಂದು ೨.೮ ರೂ. ಕೋಟಿ ಬಂಡವಾಳದೊಂದಿಗೆ ಸುಮಾರು ೫೫೦೦ಕ್ಕೂ ಹೆಚ್ಚು ಶೇರುದಾರರನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು ರೂ. ೪೦೦ ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸುವ ಮೂಲಕ ಸಮಾಜಕ್ಕೆ ಹಲವು ಉತ್ತಮ ಸೇವಾ ಸೌಲಭ್ಯಗಳು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಬಡವರ್ಗದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಂಘವು ಉನ್ನತ ಮಟ್ಟಕ್ಕೇರಲು ಸಾಧ್ಯವಾಗಿದೆ. ಸಂಘವು ೨೦೨೨ರ ಸಾಲಿನಲ್ಲಿ ೧ ಕೋಟಿಗೂ ಮಿಕ್ಕಿ ಲಾಭ ಪಡೆದಿದ್ದು, ಗ್ರಾಹಕರಿಗೆ ಶೇ. ೨೦ ಡಿವಿಡೆಂಡ್ ನೀಡಿದೆ. ಸಂಘ ಸ್ಥಾಪನೆಯಾದ ವರ್ಷದಿಂದ ಈ ವರೆಗೆ ಎ ಗ್ರೇಡ್ ಮಾನ್ಯತೆ ಪಡೆದಿರುತ್ತದೆ.

ವೃತ್ತಿ ಬದುಕಿನ ಆಸರೆ ಅರಸುವ ಶ್ರೀಸಾಮಾನ್ಯರಿಗೆ ಸಂಘವು ದಾರಿದೀಪವಾಗಿದೆ. ೨೫೦೦ಕ್ಕೂ ಮಿಕ್ಕಿ ರಿಕ್ಷಾ ಚಾಲಕರಿಗೆ ಸಾಲ ಸೌಲಭ್ಯವನ್ನು ಒದಗಿಸಿ ಮಾಲಕರನ್ನಾಗಿ ರೂಪಿಸಿದ ಸಂಘವು ಬೀದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಮುಂತಾದ ಸಾವಿರಾರು ಸಣ್ಣಪುಟ್ಟ ವೃತ್ತಿಬಾಂಧವರಿಗೆ ಮೂಲ ಬಂಡವಾಳಕ್ಕಾಗಿ ಸಾಲ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದೆ. ಸಾಲ ಸಹಕಾರದೊಂದಿಗೆ ಗ್ರಾಹಕರಿಗೆ ಸೂಕ್ತ ವೃತ್ತಿ ಮಾರ್ಗದರ್ಶನ ಕೂಡಾ ಕಾಲಕಾಲಕ್ಕೆ ನೀಡಲಾಗುತ್ತಿದೆ.

ಸಂಘವು ಉಚಿತ ಕಣ್ಣು ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮತ್ತು ಹಲವು ಸಂಘ ಸಂಸ್ಥೆಗಳಿಗೆ ಸಹಾಯಧನ ನೀಡುವುದರ ಮೂಲಕ ಸಮಾಜ ಸೇವೆಗೂ ಬದ್ಧವಾಗಿದೆ.

ಇಂದು ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಮೋರ್ಗನ್ಸ್ ಗೇಟ್‌ನಲ್ಲಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿದ್ದು, ಹಂಪನಕಟ್ಟೆ, ಕಾವೂರು, ಕಾಟಿಪಳ್ಳ-ಕೈಕಂಬ ಮತ್ತು ಉಳ್ಳಾಲ ಮುಂತಾದೆಡೆ ೫ ಶಾಖಾ ಕಚೇರಿಗಳನ್ನು ಹೊಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು