ಮಂಗಳೂರು: ಪಚ್ಚನಾಡಿ ಸಮೀಪದ ಮಂದಾರ ಬಳಿ ರೈಲು ಹಳಿ ಮೇಲೆ ಮರಬಿದ್ದು ಸಂಭವಿಸಬಹುದಾಗಿದ್ದ ರೈಲು ದುರ್ಘಟನೆಯನ್ನು ಸಮಯಪ್ರಜ್ಞೆಯಿಂದ ತಪ್ಪಿಸಿ ಪ್ರಯಾಣಿಕರ ಜೀವ ರಕ್ಷಿಸಿದ ಚಂದ್ರಾವತಿ ಮನೆಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಭೇಟಿ ನೀಡಿದರು. ಚಂದ್ರಾವತಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮನಪಾ ಸದಸ್ಯರುಗಳಾದ ಸಂಗೀತಾ , ಕಿರಣ್ ಕುಮಾರ್, ಸ್ಥಳೀಯ ಮುಖಂಡರು, ಗಣ್ಯರು, ಕಾರ್ಯಕರ್ತರು ಜೊತೆಗಿದ್ದರು.