ಬೆಳ್ತಂಗಡಿ: ಗುರುವಾಯನಕರೆ ಸಮೀಪದ ಶಕ್ತಿನಗರ ಎಂಬಲ್ಲಿ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಏ. 10ರಂದು ನಡೆದಿದೆ.
ಕೇರಳ ಮೂಲದ ಬೆಳ್ತಂಗಡಿಯ ಬದ್ಯಾರು ಸಮೀಪ ರಬ್ಬರ್‌ಟ್ಯಾಪಿಂಗ್ ಮಾಡುತ್ತಿದ್ದ ಸೆಲ್ವ ರಾಜ್ (50) ಮೃತಪಟ್ಟಿದ್ದು, ಮತ್ತೋರ್ವ ಗುರು ವಾಯನಕೆರೆ ಪೊಟ್ಟುಕೆರೆ ಬರಾಯ ಪಲ್ಕೆ ನಿವಾಸಿ ಲೋಕೇಶ್ ಗೌಡ ಗಾಯಗೊಂಡಿದ್ದಾರೆ.
ಸೆಲ್ವ ರಾಜ್ ಮೃತದೇಹ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಲೋಕೇಶ್‌ರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ.