ಮಂಗಳೂರು: ಥಾಯ್ಲೆಂಡ್‌ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುವ ಸಂದರ್ಭದಲ್ಲಿ ಮಂಗಳೂರಿನ ಉದ್ಯಮಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರನ್ನು ನಗರದ ಗೋರಿಗುಡ್ಡೆ ನಿವಾಸಿ ಓಷಿನ್ ಪಿರೇರ (28) ಎಂದು ಗುರುತಿಸಲಾಗಿದೆ. ಇವರು ನಗರದ ಸೇಂಟ್ ಆಗ್ನೆಸ್ ಕಾಲೇಜು ಬಳಿ ಇರುವ ‘ಮಂಗಳೂರು ಬೇಕಿಂಗ್ ಕಂಪನಿ’ ರೆಸ್ಟೋರಂಟ್ ಒಡತಿಯಾಗಿದ್ದ ಅವರು ಉದಯೋನ್ಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.