ಮಂಗಳೂರು: ದೇಶದೆಲ್ಲೆಡೆ ಬಿಸಿಲ ಝಳ ಹೆಚ್ಚಿದ್ದು, ನೀರಿಗಾಗಿ ಹಾಹಾಕಾರ ಎದ್ದಿದೆ. ಪ್ರಾಣಿ, ಪಕ್ಷಿ ಸಂಕುಲ ಜೀವನಸಂಕುಲ ನೀರಿಗಾಗಿ ಪರಿತಪಿಸುವ ಸ್ಥಿತಿ ಉಂಟಾಗಿದೆ.
ಮಂಗಳೂರು ನಗರದಲ್ಲಿಯೂ ಹನಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ತುಂಬೆ, ಎಎಂಆರ್ ಸೇರಿದಂತೆ ಬಹುತೇಕ ಜಲಮೂಲಗಳು ಬರಿದಾಗುತ್ತಿವೆ. ಈ ನಿಟ್ಟಿನಲ್ಲಿ ನ್ಯೂಸ್ ಕರ್ನಾಟಕ, ನ್ಯೂಸ್ ಕನ್ನಡ ಮಾಧ್ಯಮ ಸಂಸ್ಥೆ ರೋಟರಿ ಮಂಗಳೂರು ಸಹಯೋಗದೊಂದಿಗೆ ನೀರು ಉಳಿಸಿ ಅಭಿಯಾನ ಹಮ್ಮಿಕೊಂಡಿದೆ. ಜನರಲ್ಲಿ ನೀರು ಮಿತಬಳಕೆ ಜಾಗೃತಿಗಾಗಿ ಅಭಿಯಾನ ಹಮ್ಮಿಕೊಂಡಿದೆ.
ಹೋಟೆಲ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನೀರು ಮಿತಬಳಕೆ ಜಾಗೃತಿ ಸ್ಟಿಕರ್‌ಗಳನ್ನು 200ಕ್ಕೂ ಅಧಿಕ ಸ್ಥಳಗಳಲ್ಲಿ ಅಂಟಿಸಲಾಗಿದೆ. ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳು ಅರಿವು ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.