ಪುತ್ತೂರು: ಅತೀ ಕುತೂಹಲದ ಕಣವಾಗಿ ಗುರುತಿಸಿಕೊಂಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ ಬಿಜೆಪಿಯಿಂದ ಹೊರಬಂದ ಅಶೋಕ್ ಕುಮಾರ್ ರೈ ಎಪ್ರಿಲ್ 19 ರಂದು ನಾಮಪತ್ರ ಸಲ್ಲಿಸಿದರು.
ದರ್ಬೆ ವೃತ್ತದಿಂದ ಸಹಸ್ರಾರು ಸಂಖ್ಯೆಯ ಕಾಂಗ್ರೇಸ್ ಕಾರ್ಯಕರ್ತರೊಂದಿಗೆ ಮೆರವಣಿಗೆಯ ಮೂಲಕ ಆಗಮಿಸಿ ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಆಯುಕ್ತರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗೇಸ್ ಅಭ್ಯರ್ಥಿ ಜೊತೆಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಉಪಸ್ಥಿತರಿದ್ದು, ಮಾರ್ಗದರ್ಶನ ನೀಡಿದರು. ಮೆರವಣಿಗೆಯಲ್ಲಿ ಕಲ್ಕಡ್ಕ ಗೊಂಬೆ, ಚೆಂಡೆ ತಂಡ, ಹುಲಿವೇಷ ತಂಡ ಸೇರಿದಂತೆ ಹಲವು ಆಕರ್ಷಣೆಯ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.