ಕುಂದಾಪುರ: ಪಶುಪತಿ ಆಚಾರ್ಯರಿಂದ ಆರಾಧಿಸಲ್ಪಟ್ಟ ಬೈಂದೂರು ತಾಲೂಕಿನ ಪ್ರಸಿದ್ಧ ಶ್ರೀ ಆದಿಶಕ್ತಿ ದೇವಸ್ಥಾನ ಮೂಡು ತಾರೀಬೇರು ದೇವಸ್ಥಾನಸಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮತ್ತು ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಶ್ರೀ ವಿಶ್ವವಲ್ಲಭ ತೀರ್ಥ ಶ್ರೀ ಪಾದರು ಸೋದೆ ಮಠ ಉಡುಪಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿ ಪ್ರಾಮಾಣಿಕ ಭಕ್ತಿಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿದೆ ಎಂದು ನುಡಿದರು.
ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಶ್ರೀವರಹಾ ದೇವಸ್ಥಾನ ಮರವಂತೆ ಸಮಿತಿ ಅಧ್ಯಕ್ಷ ಸತೀಶ್ ಎಂ ನಾಯಕ್, ಶಾಂತಾರಾಮತೇಜ, ಬಡಿಯ, ನರಸಿಂಹ ಪೂಜಾರಿ, ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಪಾತ್ರಿಗಳು, ಅರ್ಚಕರು, ಆಡಳಿತ ಸಮಿತಿ ಅಧ್ಯಕ್ಷರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಲಚ್ಚು ಪೂಜಾರಿ, ಶೋಭಾ ಮೋಹನ್ ಪೂಜಾರಿ, ಸುರೇಂದ್ರ ಮೊಗವೀರ, ಉದಯ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಶಾಂತ್ ಪೂಜಾರಿ ಬಡಾಕೆರೆ ಸ್ವಾಗತಿಸಿದರು. ಅಭಿಷೇಕ್ ದೇವಾಡಿಗ ವಂದಿಸಿದರು.