ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಂಡಾಯ ಅಭ್ಯರ್ಥಿ ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಅಶ್ರಫ್ ಕಲ್ಲೆಗ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಈ ಹಿಂದೆ ಸಲ್ಲಿಸಿದ್ದರು.
ಇಂದು ನಾಮಪತ್ರ ಹಿಂದೆ ಪಡೆಯಲು ಕೊನೆಯ ದಿನವಾಗಿದ್ದು ಪಕ್ಷದ ವರಿಷ್ಟರು ಅವರ ಮನವೊಲಿಸುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಪುತ್ತೂರು ತಾಲೂಕು ಕಛೇರಿಗೆ ಅಶ್ರಫ್ ಕಲ್ಲೇಗ ತಮ್ಮ ಬೆಂಬಲಿಗರು ಹಾಗೂ ಜೆಡಿಎಸ್ ಅಧಿಕೃತ ಅಭ್ಯರ್ಥಿ ದಿವ್ಯಾ ಪ್ರಭಾ ಗೌಡ , ಹಾಗೂ ಜೆಡಿಎಸ್ ಪಕ್ಷದ ವರಿಷ್ಠರೊಂದಿಗೆ ಆಗಮಿಸಿ ಚುನಾವಣ ನಾಮಪತ್ರ ಹಿಂಪಡೆಯುವ ಸಲುವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ನಾಮಪತ್ರ ಹಿಂಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ರಫ್ ರವರು ಪಕ್ಷಕ್ಕೆ 30 ವರ್ಷದಿಂದ ದುಡಿಯುತ್ತಿದ್ದು ನಾನು ಕೂಡ ಒಬ್ಬ ಪ್ರಬಲ ಆಕಾಂಕ್ಷಿಯಾಗಿದ್ದೆ ಪಕ್ಷವು ಏಕಾಏಕಿ ಹೊಸ ಅಭ್ಯರ್ಥಿಯನ್ನು ಘೋಷಿಸಿದ್ದು ಬೇಸರವಾಗಿತ್ತು ಹಾಗಾಗಿ ತನ್ನ ಬೆಂಬಲಿಗರ ಒತ್ತಾಯದ ಮೇರೆಗೆ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದೆ.
ನಂತರ ಪಕ್ಷದ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಇಷ್ಟು ವರ್ಷ ದುಡಿದ ಪಕ್ಷ ವನ್ನು ಬಿಡುವ ಮಾತೆ ಇಲ್ಲ ಪಕ್ಷವು ಒಂದು ಒಳ್ಳೆ ಸಮುದಾಯದ ಜಾತ್ಯತೀತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು.
ನಂತರ ಮಾತನಾಡಿದ ದಿವ್ಯ ಪ್ರಭಾ ಪಕ್ಷದಲ್ಲಿ ದುಡಿದ ಕಾರ್ಯಕರ್ತರು ಟಿಕೇಟ್ ಆಕಾಂಕ್ಷಿಯಾಗುವುದು ಸಹಜ ಆದರೆ ಪಕ್ಷದ ಹಿರಿಯರ ಮಾತಿಗೆ ಬೆಲೆಕೊಟ್ಟು ಅಶ್ರಫ್ರವರು ನಾಮ ಪತ್ರ ಹಿಂಪಡೆದುಕೊಂಡಿದ್ದಾರೆ.ಈಗಾಗಲೇ ತಿಳಿಸಿದಂತೆ ಅವರು ಪಕ್ಷದ ವಿರುದ್ಧವಾಗಿ ಹೋಗುವುದಿಲ್ಲ ಎಂಬ ನಂಬಿಕೆ ಇತ್ತು ಹಾಗೂ ಜೆಡಿಎಸ್ ಅಭ್ಯರ್ಥಿಯಾದ ನನ್ನನ್ನು ಅವರ ನೇತೃತ್ವದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಗೆಲ್ಲಿಸಿಕೊಡುತ್ತಾರೆ ಎಂಬ ಆಶ್ವಾಸನೆ ನೀಡಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಪಕ್ಷದ ಉನ್ನತ ಸ್ಥಾನಗಳು ಅವರಿಗೆ ಸಿಗುವಂತೆ ಎಲ್ಲರೂ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.