ಮಂಗಳೂರು: ಕೆಎಂಸಿ ಆಸ್ಪತ್ರೆ ಮಂಗಳೂರು ಮತ್ತು ಫಿಜಾ ನೆಕ್ಸಸ್ ಆಶ್ರಯದಲ್ಲಿ ಏಪ್ರಿಲ್ 30ರಂದು ಪಾಂಡೇಶ್ವರ ಫಿಜಾ ನೆಕ್ಸಸ್ ಮಾಲ್‌ನಲ್ಲಿ ಕಿಡ್ಸ್ ಸಮ್ಮರ್ ಕಾರ್ನಿವಲ್ ಹಮ್ಮಿಕೊಳ್ಳಲಾಗಿದೆ. ಚಿಣ್ಣರಲ್ಲಿ ಆರೋಗ್ಯಕರ ಹವ್ಯಾಸ ಬೆಳೆಸುವ ಉದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗ್ಗೆ 10.45ರಿಂದ 12.45ರವರೆಗೆ ಡ್ರಾಯಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಈ ಸ್ಪರ್ಧೆಯು 6ರಿಂದ 9 ಮತ್ತು 10ರಿಂದ 15 ವಯಸ್ಸಿನ ವಿಭಾಗದಲ್ಲಿ ನಡೆಯಲಿದೆ. ಅದೇರೀತಿ ಬೆಂಕಿರಹಿತ ಅಡುಗೆ ಸ್ಪರ್ಧೆ ಆಯೋಜಿಸಲಾಗಿದ್ದು, 4.30ರಿಂದ 5.30ರವರೆಗೆ ನಡೆಯಲಿದೆ. ಇದು ಹೆಲ್ತಿ ಸ್ನ್ಯಾಕ್ಸ್ ಥೀಂ ಅಡಿಯಲ್ಲಿ ನಡೆಯಲಿದೆ.
ವಿಜೇತರಿಗೆ ಆಕರ್ಷಕ ಬಹುಮಾನವಿದೆ. ಅದೇರೀತಿ ಪಾಲ್ಗೊಂಡ ಪ್ರತಿ ಸ್ಪರ್ಧಿಗೆ ಗಿಫ್ಟ್ ಕೂಪನ್ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ 9108029534 ಏ.26 ನೋಂದಣಿಗೆ ಕೊನೆ ದಿನ.