ಮಂಗಳೂರು: ಮಳೆಗಾಗಿ ವಿಶ್ವ ಹಿಂದು ಪರಿಷತ್ ನೀಡಿದ ಕರೆಯಂತೆ ವಿವಿಧ ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಜಿಲ್ಲೆಯಲ್ಲಿ ಈ ಬಾರಿ ಸೆಖೆ ವಿಪರೀತವಾಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಹಿನ್ನಲೆಯಲ್ಲಿ ವರುಣದೇವನ ಕೃಪೆಗಾಗಿ ವಿವಿಧ ದೇವಳಗಳಲ್ಲಿ ಪ್ರಾರ್ಥನೆ ನಡೆಯಿತು.
ಕದ್ರಿ ಮಂಜುನಾಥೇಶ್ವರ ದೇವಳ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಸುಳ್ಯ ಚನ್ನಕೇಶವ ದೇವಳ, ಮರೋಳಿ ದೇವಸ್ಥಾನದ ಸೇರಿದಂತೆ ವಿವಿಧ ಹಿಂದು ಶ್ರದ್ಧಾಕೇಂದ್ರಗಳಲ್ಲಿ ಪ್ರಾರ್ಥನೆ ನಡೆಯಿತು.
ವಿಹಿಂಪ ಮುಖಂಡರಾದ ಎಂ.ಬಿ. ಪುರಾಣಿಕ್, ಶರಣ್ ಪಂಪ್‌ವೆಲ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.