ಮಂಗಳೂರು: ವ್ಯಸನ ಮುಕ್ತ ಕಡೆಗೆ ನಮ್ಮ ಕಾಲ್ನಾಡಿಗೆ ಎಂಬ ಗುರಿಯೊಂದಿಗೆ ಸಿ.ಓ.ಡಿ.ಪಿ, ಬಾಂಧವ್ಯ, ಪಾದುವ College of Commerce and Management ,ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ , ವೈಟ್ ಡೌವ್ಸ್ ಮಂಗಳೂರು ಜಂಟಿ ಸಂಯೋಜಕತ್ವದಲ್ಲಿ, ರೋಶನಿ ನಿಲಯ, ಸಂತ ಆಗ್ನೇಸ್ ಮಹಾ ವಿದ್ಯಾಲಯ, ಸಹಜೀವನ ಜಿಲ್ಲಾ ಒಕ್ಕೂಟದ ಸಹಕಾರದಿಂದ ಪಾದುವ ಸಿ.ಓ.ಡಿ.ಪಿಯಿಂದ ಬೆಂದೂರ್ ಚರ್ಚ್ ವರೆಗೆ ಕಾಲ್ನಾಡಿಗೆ WALKATHON ವ್ಯಸನ ವಿರೋದಿ ಜಾಗೃತಿ ಜಾಥಾ ನಡೆಯಿತು.
ಈ ನಡಿಗೆಯು ವ್ಯಸನ ಮುಕ್ತ ನವ ಸಮಾಜ ನಿರ್ಮಾಣ ಸಪ್ತಂಬರ್ ಜಾಗೃತಿ ಮಾಸ ಎಂಬ ಮಂಗಳೂರು ಧರ್ಮಾ ಪ್ರಾಂತ್ಯದ ಬಿಷಪರ ಚಿಂತನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಕಮಿಷನ್ ರವರ ವ್ಯಸನ ಮುಕ್ತ ಮಂಗಳೂರು ನಗರದೆಡೆಗೆ ಎಂಬ ಕಾರ್ಯಕ್ರಮ ನಡೆಯಿತು.
ಬೆಂದೂರ್ ಚರ್ಚ್ ಧರ್ಮಗುರು ವಿನ್ಸೆಂಟ್ ಮೊಂತೇರೋ ರವರು ಕಾಲ್ನಡಿಗೆ ಸಂಪನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಯುವಕರಿಗೆ ಸ್ಫೂರ್ತಿ ನೀಡಿದರು. ಕರ್ನಾಟಕ ಲೋಕಾಯುಕ್ತ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಸಿ.ಎ. ಸೈಮನ್ ರವರು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯ ಬಗ್ಗೆ ವಿವರ ನೀಡಿದರು. ಕಣಚೂರು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ವಿಕ್ಟರ್ ರೋಹನ್ ಮೊನಿಸ್ ರವರು ಡ್ರಗ್ಸ್ ಪರಿಣಾಮದ ಬಗ್ಗೆ ವಿವರಿಸಿದರು.
ಕಾರ್ಯಕ್ರಮಕ್ಕೆ ಸಿ.ಓ.ಡಿ.ಪಿ ನಿರ್ದೇಶಕರಾದ ವಿನ್ಸೆಂಟ್ ಡಿಸೋಜಾ ರವರು ಸ್ವಾಗತಿಸಿದರು. ಪಾದುವ ಕಾಲೇಜು ಪ್ರಾಂಶುಪಾಲ ವಂದನೀಯ ಅರುಣ್ ಲೋಬೊರವರು ವಂದನಾರ್ಪಣೆ ಮಾಡಿದರು. ಮಾನ್ಯ ರೋಹನ್ ಸಾಂತುಮಾಯೇರ್ ಕಾಲೇಜ್ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದರು.