News Karnataka Kannada
Saturday, April 27 2024
ಮಂಗಳೂರು

ಬಂಟ್ವಾಳ: ಮತದಾನ ಹೆಚ್ಚಳಕ್ಕೆ ಮಾದರಿ ಮತಗಟ್ಟೆಗಳ ನಿರ್ಮಾಣ

Construction of model polling booths for full-fledged voting
Photo Credit : News Kannada

ಬಂಟ್ವಾಳ: ಮತಗಟ್ಟೆ 2023 ರ ಸಾರ್ವತ್ರಿಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಪ್ರಮಾಣದ ಮತಚಲಾವಣೆಯ ಉದ್ದೇಶದಿಂದ ಈ ಬಾರಿ ವಿಶೇಷವಾಗಿ ಮತದಾರರನ್ನು ಆಕರ್ಷಿಸಲು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 13 ಕಡೆಗಳಲ್ಲಿ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಹೆಚ್ಚು ಮಹಿಳಾ ಮತದಾರರಿರುವ ಮತಗಟ್ಟೆಗಳು, ಕಳೆದ ಬಾರಿ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳು ಹೀಗೆ ಬೇರೆ ಬೇರೆ ಮಾನದಂಡಗಳನ್ನು ಪರಿಗಣಿಸಿ  ಈ ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು ಆ ಮೂಲಕ ಜನರನ್ನು ಆಕರ್ಷಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡಿದೆ.

ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಪ್ರತಿ ಮತಗಟ್ಟೆಗಳಲ್ಲಿ ನೂರಕ್ಕೆ ನೂರು ಮತದಾನ ಆಗಬೇಕು ಎಂಬುದು ಚುನಾವಣಾ ಆಯೋಗದ ಆಶಯವಾಗಿದೆ. ಹಾಗಾಗಿ ಬಂಟ್ವಾಳ ಕ್ಷೇತ್ರದ 13 ಮತಗಟ್ಟೆಗಳಾದ ಪೊಳಲಿ, ಸಂಗಬೆಟ್ಟು,ನರಿಕೊಂಬು, ಕಕ್ಯೆಪದವು, ಮಾಣಿ , ಸೇರ, ನೇರಳಕಟ್ಟೆ, ಬಾಬನಕಟ್ಟೆ, ಕಲ್ಲಡ್ಕ, ಬೆಂಜನಪದವು, ಕೆದ್ದಳಿಕೆ, ಕೊಯಿಲ, ಮಜಿ ಶಾಲೆಯಲ್ಲಿ ಅಕರ್ಷಕ ದ್ವಾರ, ವರ್ಣರಂಜಿತ ಚಿತ್ತಾರ, ಕರಾವಳಿಯ ಸಂಸ್ಕೃತಿಯ ಚಿತ್ರಗಳನ್ನು ಬಿಡಿಸಲಾಗಿದೆ.

ಗೋಗ್ರೀನ್, ವಿಕಲಚೇತನ, ಸಖೀ,ನೀಲತರಂಗಿ ಕಂಬಳ ಹೀಗೆ ಮತಗಟ್ಟೆಗಳಿಗೆ ವಿವಿಧ ಹೆಸರುಗಳನ್ನು ಇಡಲಾಗಿದೆ. ಇದು ಮತದಾರರನ್ನು ಆಕರ್ಷಿಸುವಲ್ಲಿ ಎಷ್ಟರಮಟ್ಟಿಗೆ ನೆರವಾಗುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು