News Kannada
Thursday, February 22 2024
ಮಂಗಳೂರು

ಬಂಟ್ವಾಳ: 21 ನೇ ವರ್ಷದ ನವದಂಪತಿ ಸಮಾವೇಶ

Bantwal: The 21st annual couple's conclave
Photo Credit : By Author

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವೇದವ್ಯಾಸ ಧ್ಯಾನ ಮಂದಿರದಲ್ಲಿ 21 ನೇ ವರ್ಷದ ನವದಂಪತಿ ಸಮಾವೇಶವು ಭಾನುವಾರ ನಡೆಯಿತು.

ಹಿರಿಯ ದಂಪತಿಗಳಾಗಿ ಭಾಗವಹಿಸಿದ ಕೆ ವಿಠಲ ಶೆಟ್ಟಿ ಹಾಗೂ ಪ್ರೇಮ ಅವರು ನವದಂಪತಿ ಸಮಾವೇಶವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ತಾವು ವೈವಾಹಿಕ ಜೀವನದಲ್ಲಿ ನಡೆದು ಬಂದ ಜೀವನದ ಅನುಭವವನ್ನು ಹಂಚಿಕೊಳ್ಳುತ್ತಾರಾಷ್ಟ್ರದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ಧರ್ಮವನ್ನು ಬಿಡಬಾರದು. ಮುಂದಿನ ಪೀಳಿಗೆಯನ್ನು ಚೆನ್ನಾಗಿ ಬೆಳೆಸುವಂತಾಗಲಿ ಎಂದು ಶುಭ ಹಾರೈಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ೧೬ ಸಂಸ್ಕಾರದಲ್ಲಿ ಮದುವೆ ಒಂದು ಉತ್ತಮವಾದ ಸಂಸ್ಕಾರ. ಪರಸ್ಪರ ನಂಬಿಕೆ ಮತ್ತು ಜೀವನ ನಮ್ಮನ್ನು ಒಂದಾಗಿಸುತ್ತದೆ. ಒಟ್ಟಾಗಿ ಬದುಕುವಂತಹ ಸಾಮರಸ್ಯದ ಜೀವನವೇ ಮದುವೆ ಎಂದು ನುಡಿದರು.

ಕುಟುಂಬ ಪ್ರಭೋದನ್ ಪ್ರಮುಖರಾದ ಗಜಾನನ ಪೈಯವರು ಮಾತನಾಡುತ್ತಾ ಎರಡು ಕುಟುಂಬಗಳು ಬೇರೆ ಬೇರೆಯಾಗಿದ್ದರೂ ಅದನ್ನು ಒಟ್ಟಾಗಿ ನಡೆಸಿಕೊಂಡು ಹೋಗುವುದು ಹಾಗೂ ಸಂತತಿಯನ್ನು ಪಡೆದು ಸಂಸ್ಕಾರಯುತವನ್ನಾಗಿ ಬೆಳೆಸುವ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಮಾರ್ಗದರ್ಶನ ಮಾಡಿದರು.

ತಮ್ಮ ಕುಟುಂಬವನ್ನು ಚೈತನ್ಯಶೀಲವನ್ನಾಗಿ ಮಾಡಲು ಮಾನಸಿಕವಾಗಿ ನಾವು ಸಿದ್ದರಾಗಾಬೇಕು. ಮತ್ತು ಅದನ್ನು ಕಾರ್ಯರೂಪಕ್ಕೆ ತರಬೇಕು. ಆಗ ಮಾತ್ರ ರಾಷ್ಟ್ರವು ಸಮರ್ಥ ಹಾಗೂ ಸದೃಢವಾಗುತ್ತದೆ. ಎಂದು ಸು.ರಾಮಣ್ಣ ನವದಂಪತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಆಗಮಿಸಿದ ಎಲ್ಲಾ ನವದಂಪತಿಗಳಿಗೆ ಮಾತೆಯರು ಕಾಲಿಗೆ ನೀರು ಹಾಕಿ ತೊಳೆದು, ಆರತಿ ಬೆಳಗಿ, ಅರಶಿನ, ಕುಂಕುಮ ಹಚ್ಚಿ ಸ್ವಾಗತಿಸಿದರು. ಎಲ್ಲಾ ನವದಂಪತಿಗಳು ಘೃತಾಹುತಿ ಅರ್ಪಿಸಿ ಶಿಶುಮಂದಿರದ ಗುಹೆಯ ಮೂಲಕ ವೇದಘೋಷದೊಂದಿಗೆ ಸಭಾಂಗಣ ಪ್ರವೇಶಿಸಿದರು.

ಕಾರ‍್ಯಕ್ರಮದಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಡಾ. ಕಮಲಾ ಪ್ರಭಾಕರ ಭಟ್, ಎಲ್ಲಾ ವಿಭಾಗದ ಪ್ರಮುಖರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಶಿಶುಮಂದಿರದ ಮಾತೆಯರು ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಕಾರ‍್ಯ ನಿರ್ವಹಿಸಿದರು, ಒಟ್ಟು ೧೦೪ ಜೋಡಿ ದಂಪತಿಗಳು ಉಪಸ್ಥಿತರಿದ್ದು, ಕಾರ್ಯಕ್ರಮ ಪೂರ್ತಿ ಭಾಗವಹಿಸಿದ್ದರು. ಪ್ರಮೀಳಾ ಪ್ರಾರ್ಥಿಸಿದರು, ದಿವ್ಯಾ ಸ್ವಾಗತಿಸಿದರು, ಸೌಮ್ಯ ವಂದಿಸಿದರು, ಮಂಜುಳಾ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು