News Karnataka Kannada
Saturday, April 20 2024
Cricket
ಮಂಗಳೂರು

ಬಂಟ್ವಾಳ: ರಾಜೇಶ್‌ ನಾಯ್ಕ್‌ ಆಡಳಿತದಲ್ಲಿ ಕೋಮುದ್ವೇಷ ದೂರವಾಗಿ ಸೌಹಾರ್ದ ಬಂಟ್ವಾಳ

Under Rajesh Naik's rule, communal hatred has been removed and harmony has been created in Bantwal.
Photo Credit : Facebook

ಬಂಟ್ವಾಳ: ಐದು ವರ್ಷಗಳಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಕೋಮುದ್ವೇಷದ ಘಟನೆ, ಹಿಂಸಾಚಾರದಂತಹ ಘಟನೆಗಳು ಸಂಭವಿಸಿಲ್ಲ ಎಂಬುದು ಗಮನಾರ್ಹ ಸಂಗತಿ. ಅದೇ ರೀತಿ ಪ್ರಗತಿಯ ವಿಚಾರದಲ್ಲಿಯೂ ಬಂಟ್ವಾಳ ಮುನ್ನಡೆಯಲ್ಲಿರುವುದು ಸ್ಪಷ್ಟ. ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಅವರ ನಾಯಕತ್ವದಲ್ಲಿ ಪ್ರತಿಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿದೆ. ಅಂತೆಯೇ ಗದ್ದಲ, ಗೊಂದಲ, ಕೋಮುದಳ್ಳುರಿಯಿಂದ ಜರ್ಝರಿತವಾಗಿದ್ದ ಬಂಟ್ವಾಳದಲ್ಲೀಗ ಶಾಂತಿ ನೆಲೆಸಿರುವುದು ಜನರ ಮಾತಿನಲ್ಲಿ ವ್ಯಕ್ತವಾಗುತ್ತಿದೆ. ಅಲ್ಲದೆ ಶಾಸಕ ರಾಜೇಶ್‌ ನಾಯ್ಕ್‌ ೨೧೦೮.೫೩ ಕೋಟಿ ರೂ ಅನುದಾನದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಇದು ಕೂಡ ಅವರ ವಿಜಯದ ಹಾದಿ ಸುಗಮ ಮಾಡುವುದರಲ್ಲಿ ಎರಡು ಮಾತಿಲ್ಲ.

ಕೋಮುದಳ್ಳುರಿ ದೂರ: ಕೋಮು ಘರ್ಷಣೆಯಿಂದ ಎರಡೂ ಧರ್ಮದವರ ಹತ್ಯೆ,ಹೊಡೆದಾಟ, ಲವ್ ಜಿಹಾದ್, ಗೋಹತ್ಯೆ, ಲವ್ ಜಿಹಾದ್‌ನಂತಹ ಪ್ರಕರಣಗಳಿಗೆ ಕಡಿವಾಣ ಬಿದ್ದಿದೆ. ಇದರಿಂದ ರಾಜೇಶ್ ನಾಯ್ಕ್ ಗೆಲುವು ಖಚಿತ ಎಂಬ ವಾತಾವರಣವಿದೆ.

ಅಭಿವೃದ್ಧಿ ಕಾರ್ಯಗಳ ವಿವರ: ರಾಜೇಶ್ ನಾಯ್ಕ್ರ ಅವವರ ಶ್ರಮದಿಂದ ಪೂಂಜಾಲಕಟ್ಟೆಯಲ್ಲಿ ನಾರಾಯಣಗುರು ವಸತಿ ಶಾಲೆ ಆರಂಭವಾಗಿದ್ದು,೧೩೫ ಕೋಟಿ ರೂ ವೆಚ್ಚದಲ್ಲಿ ಜಕ್ರಿಬೆಟ್ಟುವಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಐಸಿಯು ಬಸ್ ಸೌಲಭ್ಯವನ್ನು ಕ್ಷೇತ್ರದ ಜನರ ಆರೋಗ್ಯ ಕಾಪಾಡಲು ಒದಗಿಸಲಾಗಿದೆ. ಕ್ಷೆತ್ರದಲ್ಲಿ ೧,೫೧೫ ರಸ್ತೆಗಳ ನಿರ್ಮಾಣ. ಕಿಂಡಿ ಅಣೆಕಟ್ಟು, ೩೧೮ ಧಾರ್ಮಿಕ ಕ್ಷೇತ್ರಗಳಿಗೆ ಮೂಲ ಸೌಕರ್ಯಗಳನ್ನು ನೀಡಲಾಗಿದೆ.

ಅಭಿವೃದ್ಧಿ ಎಂಬುದು ನಿಂತನೀರಲ್ಲ, ಹರಿಯುವ ನೀರು, ಅಭಿವೃದ್ಧಿ ಜೊತೆಗೆ ಸಂಸ್ಕೃತಿ, ರಾಷ್ಟ್ರೀಯತೆಯನ್ನು ಉಳಿಸಿ, ಕ್ಷೇತ್ರದ ಪ್ರತಿಯೊಂದು ಮತದಾರರು, ಕಾರ್ಯಕರ್ತರು ಗೌರವದಿಂದ ಬದುಕಬೇಕಾದರೆ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು. ಕ್ಷೇತ್ರದ ಜನತೆ ನೀಡಿದ ಒಂದು ಮತದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ, ಕಾಶ್ಮೀರದಲ್ಲಿ ಆರ್ಟಿಕಲ್ಸ್ 370 ರದ್ದು ಮಾಡಲು ಸಾಧ್ಯವಾಯಿತು ಎಂಬುದನ್ನು ನಾವು ಖುಷಿಪಡಬೇಕಾಗಿದೆ. ಇದರ ಜೊತೆಗೆ ಬಂಟ್ವಾಳ ಕ್ಷೇತ್ರದಲ್ಲಿ ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗಿದ್ದ ಗ್ರಾಮಗಳ ಜೊತೆಗೆ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ಮಾಡಲಾಗಿದೆ.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

ಕೋಮು ಘರ್ಷಣೆಯಿಂದ ಎರಡೂ ಧರ್ಮದವರ ಹತ್ಯೆ,ಹೊಡೆದಾಟ, ಲವ್ ಜಿಹಾದ್, ಗೋಹತ್ಯೆ, ಲವ್ ಜಿಹಾದ್‌ನಂತಹ ಪ್ರಕರಣಗಳಿಗೆ ಕಡಿವಾಣ ಬಿದ್ದಿದೆ. ಇದರಿಂದ ರಾಜೇಶ್ ನಾಯ್ಕ್ ಗೆಲುವು ಖಚಿತ ಎಂದು ಮನಗಂಡ ಕಾಂಗ್ರಸ್ ನವರು ಕೇರಳದಿಂದ ಮುಸ್ಲಿಂ ಲೀಗ್‌ ನಾಯಕರನ್ನು ಕರೆಸಿ ಹೇಳಿಕೆ ನೀಡಿಸುತ್ತಿದ್ದಾರೆ.
ಹರಿಕೃಷ್ಣ ಬಂಟ್ವಾಳ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ

ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿರುವ ಎಸ್ ಡಿ ಪಿಐ , ನಿಷೇಧಿತ ಪಿಎಫ್‌ಐ ನ ಬಿ ಟೀಮ್‌ ಇದ್ದಂತೆ. ಕಾಂಗ್ರೆಸ್‌ ಅವರೊಂದಿಗೆ ಒಳ ಒಪ್ಪಂದದ ರಾಜಕೀಯ ನಡೆಸುತ್ತಿದೆ. ಐದು ವರ್ಷದ ಹಿಂದೆ ಬಂಟ್ವಾಳದಲ್ಲಿ ಇದ್ದ ಸ್ಥಿತಿಗೂ ಇಂದು ಬಂಟ್ವಾಳದಲ್ಲಿ ನೆಲೆಸಿರುವ ಶಾಂತಿ, ನೆಮ್ಮದಿಯ ವಾತಾವರಣವನ್ನು ಜನರು ಗಮನಿಸಬೇಕಿದೆ.
ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು