News Kannada
Saturday, February 24 2024
ಮಂಗಳೂರು

ಬೆಳ್ತಂಗಡಿ| ಭಾರೀ ಮಳೆ: ಹಲವು ಕಡೆ ಹಾನಿ

Heavy rains lash belthangady taluk, damages several places
Photo Credit :

ಬೆಳ್ತಂಗಡಿ: ತಾಲೂಕಿನಾದ್ಯಂತ ಗುರುವಾರ ಮುಂಜಾನೆಯಿಂದ ರಾತ್ರಿವರೆಗೆ ಸತತವಾಗಿ ಮಳೆಸುರಿಯುತ್ತಿದ್ದು ನದಿಗಳು ದಡ ಮೀರಿ ಹರಿಯತೊಡಗಿವೆ. ಮುಖ್ಯವಾಗಿ ನೇತ್ರಾವತಿ, ಮೃತ್ಯುಂಜಯ, ಪಲ್ಗುಣಿ ನದಿಗಳು ಭೋರ್ಗರೆದು ಹರಿಯುತ್ತಿವೆ.

ಮಳೆಯಿಂದಾಗಿ‌ ಮಚ್ಚಿನ ಗ್ರಾಮದ ಮರಿಯಮ್ಮ ಅವರ ಮನೆ ಭಾಗಶಃ ಕುಸಿದು ಹಾನಿಯಾಗಿದೆ. ವೇಣೂರಿನ ಅಬೂಬಕ್ಕರ್ ಸಿದ್ದಿಕಿ ಅವರ ಮನೆ‌ಪಕ್ಕದ ಬಾವಿ ಕುಸಿದು ಮನೆಗೆ ಅಪಾಯತಂದೊಡ್ಡಿದೆ.

ವೇಣೂರು ಸುದೆರ್ದು ನಿವಾಸಿ ರೇವತಿಯವರ ಹಟ್ಟಿ ಧರಾಶಾಯಿಯಾಗಿ ಗಬ್ದದ ದನವೊಂದು ಮೃತಪಟ್ನಟಿದೆ. ಹಟ್ಟಿಯಲ್ಲಿದ್ದ ಇನ್ನುಳಿದ 3 ದನಗಳು ಅಪಾಯದಿಂದ ಪಾರಾಗಿದೆ. ಗಬ್ಬದ ದನದ ಮೇಲೆ  ಮಹಡಿ ಬಿದ್ದು ಮೃತಪಟ್ಟಿದೆ.  ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮೃತ ದನದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಉಮೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು