ಬೆಳ್ತಂಗಡಿ: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವೆಡೆ ಎನ್ಐಎ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ಬೆಳ್ತಂಗಡಿ ತಾಲೂಕಿನ ಎರಡು ಕಡೆ ಎನ್ಐಎ ದಾಳಿ ನಡೆಸಿದೆ. ವೇಣೂರು ಹಾಗೂ ಉರುವಾಲುನಲ್ಲಿ ಎನ್ಐಎ ಕಾರ್ಯಾಚರಣೆ ನಡೆಸಿದ್ದು, ಉರುವಾಲು ಗ್ರಾಮದ ಹುಣ್ಸೆಕಟ್ಟೆ ನಿವಾಸಿ ಮಹಮ್ಮದ್ ಕೈಸ್ ಮನೆಗೆ ದಾಳಿಯಾಗಿದೆ. ಅದೇ ರೀತಿ ಮೂಡಬಿದಿರೆಯ ಪಟ್ಟಾಡಿಯಲ್ಲಿ ಟೈಲ್ಸ್ ಅಂಗಡಿ ಹೊಂದಿದ್ದ ಪೆರಿಂಜೆಯ ಬದ್ರುದ್ದೀನ್ ಎಂಬಾತನ ಮನೆಗೂ ಎನ್ಐಎ ದಾಳಿ ಮಾಡಿ ಹಲವು ಮಾಹಿತಿಗಳನ್ನು ಕಲೆ ಹಾಕಿದೆ.
ಎನ್ಐಎ ಕಾರ್ಯಾಚರಣೆ ವೇಳೆ ಪುಂಜಾಲಕಟ್ಟೆ ಹಾಗೂ ವೇಣೂರು ಪೊಲೀಸರು ಎನ್.ಐ.ಎ ದಾಳಿಯ ಮನೆಗೆ ಭದ್ರತೆ ಕಲ್ಪಿಸಿದ್ದರು ಎಂದು ತಿಳಿದುಬಂದಿದೆ.