News Karnataka Kannada
Friday, April 19 2024
Cricket
ಮಂಗಳೂರು

ಬೆಳ್ತಂಗಡಿ: ಅಪಪ್ರಚಾರದ ನೀಚ ರಾಜಕಾರಣ ಜನತೆಗೆ ಮನವರಿಕೆಯಾಗಿದೆ

People are convinced of the vile politics of propaganda.
Photo Credit : News Kannada

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿ ಇಲ್ಲಿ ಬಂದು ಅಪಪ್ರಚಾರದ ನೀಚ ರಾಜಕಾರಣ ಮಾಡಿರುವುದು ಇಲ್ಲಿನ ಜನತೆಗೆ ಮನವರಿಕೆಯಾಗಿದೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ ೧ ಲಕ್ಷಕ್ಕಿಂತಲೂ ಹೆಚ್ಚು ಮತವನ್ನು ಬಿಜೆಪಿಗೆ ನೀಡಿ ಗೆಲ್ಲಿಸುವ ಮೂಲಕ ಬೆಂಗಳೂರಿನ ಜಾತೀಯ ರಾಜಕಾರಣ ಇಲ್ಲಿ ನಡೆಯದು ಎಂಬುದನ್ನು ಇಲ್ಲಿನ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಹರೀಶ ಪೂಂಜ ಹೇಳಿದರು.

ಇಲ್ಲಿನ ಕಿನ್ಯಮ್ಮ ಸಭಾ ಭವನದಲ್ಲಿ ಸೋಮವಾರ ಭಾರತೀಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ಮೊನ್ನೆ ನಡೆದ ಚುನಾವಣಾ ಪ್ರಚಾರದಲ್ಲಿ ಬೆಳ್ತಂಗಡಿಯಲ್ಲಿ ಕಾಂಗ್ರೇಸ್‌ ಪಕ್ಷ ನಕಲಿ ಫೇಸ್‌ಎಕೌಂಟ್‌ಗಳನ್ನು ತೆರೆದು, ವಾಟ್ಸಾಪ್‌ ಮೂಲಕ ಅನೇಕ ರೀತಿಯ ಇಲ್ಲ ಸಲ್ಲದ ಅಪಪ್ರಚಾರಗಳನ್ನು ನಡೆಸಿತು. ಹಿಂಬದಿಯ ರಾಜಕಾರಣವನ್ನು ಎಗ್ಗಿಲ್ಲದೆ ನಡೆಸಿತು. ಜಾತಿಯನ್ನು ಎತ್ತಿಕಟ್ಟುವ ಪ್ರಯತ್ನ ನಡೆಯಿತು. ಗೌಡ ಸಮುದಾಯದ ವಿರುದ್ಧವೂ ನನ್ನನ್ನು ಎತ್ತಿಕಟ್ಟಲಾಯಿತು. ಧರ್ಮಸ್ಥಳದ ಹೆಗ್ಗಡೆಯವರ ಹಾಗೂ ನನ್ನ ಸಂಬಂಧದ ಬಗ್ಗೆಯೂ ಇಲ್ಲಸಲ್ಲದ ಆರೋಪಗಳನ್ನು ಮಾಡಿದರು.

ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಯು ಇಲ್ಲಿ ಅಭ್ಯರ್ಥಿಯಾಗಿ ನಿಂತು ಏನೆಲ್ಲಾ ರಾಜಕೀಯದ ಆಟಗಳನ್ನು ಅಡಿದರೂ ಬೆಳ್ತಂಗಡಿಯ ಜನತೆ ಬಿಜೆಪಿಯ ಕೈ ಹಿಡಿದಿದೆ. ನಿರಂತರ, ಅವ್ಯಾಹತ ಅಪಪ್ರಚಾರಗಳ ನಡುವೆ ಬಿಜೆಪಿ ಗೆದ್ದಿರುವುದು ಮೊದಲಬಾರಿಯಾಗಿದೆ. ಕಾಂಗ್ರೇಸ್‌ ಅಭ್ಯರ್ಥಿಯನ್ನು ಮತ್ತೆ ಬೆಂಗಳೂರಿನ ಮಲ್ಲೇಶ್ವರಂಗೆ ಕಳುಹಿಸಿ ಅಪಪ್ರಚಾರಗಳಿಗೆ ಇತಿಶ್ರೀ ಹೇಳುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.

ಹಿಂದುತ್ವದ ರಾಜಕಾರಣಿಯಾಗಿ ಸದಾ ಹಿಂದು ಹಿತ ಚಿಂತನೆಯಲ್ಲಿಯೇ ಮುಂದುವರಿಯುತ್ತಿರುವ ಅನೇಕ ಸಂದರ್ಭ ಕಾರ್ಯಕರ್ತರ ಪರವಾಗಿ ನಿಂತ ತನಗೆ ಹಿಂದು ಮುಖಂಡರೆಂದು ಕರೆಸಿಕೊಳ್ಳುವ ಸತ್ಯಜಿತ್‌ ಸುರತ್ಕಲ್‌, ಮಹೇಶ್‌ ಶೆಟ್ಟಿ ತಿಮರೋಡಿ, ಪ್ರವೀಣ ವಾಲ್ಕೆಯಂತವರು ನನ್ನ ವಿರುದ್ದ ಮತ ಯಾಚಿಸಿರುವುದು ದುರದೃಷ್ಟಕರ. ರಾಜ್ಯದ ಇಪ್ಪತ್ತನಾಲ್ಕು ಕಾರ್ಯಕರ್ತರನ್ನು ಹತ್ಯೆ ಮಾಡಿದ, ಬಜರಂಗದಳವನ್ನು ನಿಷೇಧಿಸುತ್ತೇನೆಂದು ಹೇಳುವ ಕಾಂಗ್ರೇಸ್‌ ಪರ ಪ್ರಚಾರ ಮಾಡಿರುವುದು ಯಾವ ಹಿಂದುತ್ವ ಎಂಬುದನ್ನು ಜನತೆಗೆ ಅವರು ಮನವರಿಕೆ ಮಾಡಿಕೊಡಬೇಕು ಎಂದು ಪೂಂಜ ಆಗ್ರಹಿಸಿದರು.

ವಿಧಾನ ಪರಿಷತ್‌ ಪ್ರತಾಪಸಿಂಹ ನಾಯಕ್‌ ಅವರು ಮಾತನಾಡಿ, ಹಿಂದುತ್ವ ಹಾಗೂ ಸಂಘಟನೆ ಇರುವಲ್ಲಿ ಪಕ್ಷ ಗೆದ್ದಿದೆ. ಪಕ್ಷಕ್ಕೆ ಅಧಿಕಾರ ಎಂಬುದು ಜವಾಬ್ದಾರಿ, ಚುನಾವಣೆ ಎಂಬುದು ಶಿಕ್ಷಣ. ಸೋಲು-ಗೆಲುವು ಅಂತಿಮವಲ್ಲ. ಹಿಂದುತ್ವ, ರಾಷ್ಟ್ರದ ಹಿತ, ಸೇವೆ ಎಂಬ ದೀಕ್ಷೆಯೊಂದಿಗೆ ನಾವು ಮುಂದುವರಿಯುತ್ತಿರಬೇಕು. ಸೋತಿದ್ದೇವೆ ಎಂಬ ಕಾರಣಕ್ಕೆ ಕುಗ್ಗುವುದಿಲ್ಲ, ಪಲಾಯನವೂ ಮಾಡುವುದಿಲ್ಲ. ಬಿಜೆಪಿ ಕುಟುಂಬದ ಆಧಾರದ ಮೇಲೆ ನಡೆಯುವಂತ ಪಕ್ಷ ವಲ್ಲ. ತಪ್ಪುಗಳಾಗುವುದು ಸಹಜ. ನಾಯಕರು ತಪ್ಪು ಮಾಡಿದಾಗ ಅದನ್ನು ಅವರ ಗಮನಕ್ಕೆ ನೇರವಾಗಿ ತರಬೇಕು. ನಾಯಕರು ಸರಿ ಇಲ್ಲ ಎಂಬ ಮಾತನ್ನು ಸಾರ್ವಜನಿಕವಾಗಿ ಹೇಳಿಕೊಂಡು ತಿರುಗಾಡಿದರೆ ಪಕ್ಷದ ಪ್ರಭೆಯ ಮೇಲೆ ಪ್ರಭಾವ ಬೀರುತ್ತದೆ.

ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಇದರಿಂದ ಸಂಘಟನೆ ನಷ್ಟ. ಗೆದ್ದ ಜನಪ್ರತಿನಿಧಿಗಳು ಕಾರ್ಯಕರ್ತರ ಭಾವನೆಗಳನ್ನು ಹಂಚಿಕೊಂಡು ಜೊತೆ ಜೊತೆಯಾಗಿ ಹೆಜ್ಜೆ ಹಾಕುವ ಜವಾಬ್ದಾರಿ ಇದೆ ಎಂಬ ಮನವರಿಕೆ ಮಾಡಿದ ಅವರು ಬಿಜೆಪಿಯ ಏಳು ಬೀಳುಗಳ ಇತಿಹಾಸವನ್ನು ಹೊಸ ಪೀಳಿಗೆ ಅರಿತುಕೊಂಡು ಅದನ್ನು ಮರೆಯದೆ ಮುಂದುವರಿಯಬೇಕೆಂಬ ಸಲಹೆಯನ್ನು ಮುಂದಿಟ್ಟರು.

ಸುಳ್ಳು ಭರವಸೆಗಳ ಮೂಲ ಕಾಂಗ್ರೇಸ್‌ ಅಧಿಕಾರ ಹಿಡಿದಿದೆ. ಗ್ಯಾರಂಟಿಗಳ ಮುಖವಾಡ ಸದ್ಯದಲ್ಲೇ ಕಳಚಿಬೀಳಲಿದೆ. ನೀಡಿದ ಭರವಸೆಗಳನ್ನು ಈಡೇರಿಸುವ ತನಕ ಜನರ ಆಶೋತ್ತರಗಳಿಗೆ ಸ್ಪಂದಿಸುವ ತನಕ ಸಿದ್ಧರಾಮಯ್ಯ ಅವರನ್ನು ನಿದ್ದೆ ಮಾಡಲು ಪಕ್ಷ ಬಿಡುವುದಿಲ್ಲ ಎಂದು ನಾಯಕ್‌ ಎಚ್ಚರಿಸಿದರು.

ಅಭಿನಂದನಾ ಸಭೆಯಲ್ಲಿ ಚುನಾವಣಾ ಪ್ರಭಾರಿ ಹರಿಕೃಷ್ಣ ಬಂಟ್ವಾಳ, ಅಭ್ಯರ್ಥಿ ಪ್ರಮುಖ್‌ ಯತೀಶ್‌ ಆರ್ವಾರ್‌ ಅವರನ್ನು ಮಂಡಲದ ವತಿಯಿಂದ ಅಭಿನಂದಿಸಲಾಯಿತು. ಶಾಸಕ ಹರೀಶ ಪೂಂಜ ಅವರನ್ನು ಬೃಹತ್‌ ಹಾರ ಹಾಕುವ ಮೂಲಕ ಗೌರವಿಸಲಾಯಿತು.

ವೇದಿಕೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್‌, ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಕೊರಗಪ್ಪ ನಾಯ್ಕ, ನ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ಶ್ರೀನಿವಾಸ ರಾವ್‌, ಧನಲಕ್ಷ್ಮೀ, ವಕೀಲ ಸುಬ್ರಹ್ಮಣ್ಯ ಕುಮಾರ್‌ ಅಗರ್ತ, ಚೆನ್ನಕೇಶವ ನಾಯ್ಕ, ಗಣೇಶ್‌ ಗೌಡ ಉಪಸ್ಥಿತರಿದ್ದರು.

ಮಂಡಲ ಉಪಾಧ್ಯಕ್ಷ ಸೀತಾರಾಮ ಬಿ.ಎಸ್‌. ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್‌ ವಂದಿಸಿದರು. ರಾಜೇಶ್‌ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು