News Kannada
Monday, September 25 2023
ಮಂಗಳೂರು

ಬೆಳ್ತಂಗಡಿ: ದೇಶದಲ್ಲಿ ಹಿಂದುತ್ವದ ಅಸ್ತಿತ್ವ ಉಳಿಯಲು ಕೇಂದ್ರದಲ್ಲಿ ಬಿಜೆಪಿ ಸರಕಾರ ಅನಿವಾರ್ಯ

The BJP government at the Centre is essential for the survival of Hindutva in the country.
Photo Credit : News Kannada

ಬೆಳ್ತಂಗಡಿ: ಸಂಸದ ಸ್ಥಾನವನ್ಬು ಕೋರ್ಟು ಅನರ್ಹಗೊಳಿಸಿದ ಬಳಿಕ ಹತಾಶರಾಗಿ ವಿವಿಧ ಹೇಳಿಕೆ ಕೊಡುವ ಕಾಂಗ್ರೆಸ್ ಮುಖಂಡರು ಭಾರತವನ್ನು ಇಸ್ಲಾಂ ದೇಶ ಮಾಡಲು ಹೊರಟಿದ್ದಾರೆ. ರಾಹುಲ್ ಎಂಬ ನಕಲಿ ಗಾಂದಿಯಿಂದ ದೇಶಕ್ಕೆ ಅಪಾಯ ಖಚಿತ. ಅದಕ್ಕಾಗಿ ಭಾರತದ ಹಿಂದುಗಳಿಗೆ ರಕ್ಷಣೆ ಕೊಡಲು ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಅದಿಕಾರಕ್ಕೆ ಬರಲು ಎಲ್ಲಾ ಕಾರ್ಯಕರ್ತರು ಇಂದಿನಿಂದಲೇ ಶ್ರಮಿಸಬೇಕು ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದರು.

ಅಚರು ಶುಕ್ರವಾರ ಲಾಯಿಲದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಬೆಯನ್ನು ಉದ್ಘಾಟಿಸಿ ಮಾತನಾಡಿ ಬಿಜೆಪಿ ಪಕ್ಷದ ಅಬಿವೃದ್ಧಿ ,ಸಂಘಟನೆ, ಪಾರದರ್ಶಕತೆ ನೋಡಿ ಇದನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಜನರನ್ನು ಸುಳ್ಳು ಭಾಗ್ಯಗಳನ್ಬು ನೀಡಿ ಮೋಸದಿಂದ ಅಧಿಕಾರಕ್ಕೆ ಬಂದಿದೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಮುಳುವಾಗಲಿದ್ದು ಭರವಸೆ ಈಡೇರಿಸಲು ನೆಪವೊಡ್ಡಿದರೆ ಜನರೆ ಕಾಂಗ್ರೆಸ್ ಗೆ ಮುಂದಿನ ಲೋಕ ಸಭಾ ಚುಣಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿ ವಿರುದ್ದ 40% ಕಮಿಷನ್ ಅರೋಪ ಮಾಡಿದ ಕಾಂಗ್ರೆಸ್ ಈಗ ಅದಿಕಾರಕ್ಕೆ ಬಂದಿದೆ.ಸೂಕ್ತ ತನಿಕೆ ನಡೆಸಿ ಅರೋಪ ಸಾಬಿತಾದರೆ ಶಿಕ್ಷೆ ನೀಡಿ ಇಲ್ಲವಾದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಎಂದರು. ಬಿಜೆಪಿ ಮಂಡಲ ಅದ್ಯಕ್ಷ ಜಯಂತ್ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿ ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬೂತ್ , ಶಕ್ತಿಕೇಂದ್ರ ಬಲಗೊಳಿಸುವ ಅಗತ್ಯವಿದ್ದು ಅದಕ್ಕಾಗಿ ಕಾರ್ಯಕಾರಿಣಿ ಸಭೆಗೆ ಮಹತ್ವ ನೀಡಬೇಕಾಗಿದೆ ಎಂದರು.

ವಿದಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹನಾಯಕ್, ಮುಖಂಡ ಸುದೀರ್ ಶೆಟ್ಡಿ ಕಣ್ಣೂರು  ಉಪಸ್ಥಿತರಿದ್ದರು.

See also  ಮಂಗಳೂರು: ಪಿಎಫ್ಐ ಕಛೇರಿಗಳಿಗೆ ಬೀಗ ಜಡಿದ ಪೊಲೀಸರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು