News Kannada
Monday, March 04 2024
ಮಂಗಳೂರು

ಬೆಳ್ತಂಗಡಿ: ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಮೂವರು ಬಂಧನ

ಕಳ್ಳತನ
Photo Credit : Pexels

ಬೆಳ್ತಂಗಡಿ: ಅಕ್ರಮವಾಗಿ ಗೋ ಸಾಗಾಟದಲ್ಲಿ ತೊಡಗಿದ್ದ ವಾಹನ ಹಾಗೂ ಮೂವರನ್ನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ನಡಗ್ರಾಮದ ಮಂಜೊಟ್ಟಿ ಅಂತ್ರಾಯಪಲ್ಕೆ ಎಂಬಲ್ಲಿ ಆ.18ರ ಮುಂಜಾನೆ ನಡೆದಿದೆ.

ಪೊಲೀಸರು ಮಾರುತಿ 800 ಕಾರನ್ನು ತಪಾಸಣೆಗೆ ತಡೆದು ನಿಲ್ಲಿಸಿದಾಗ ಅದರ ಚಾಲಕ ರವೂಫ್ ಎಂಬಾತ ಓಡಿ ಪರಾರಿಯಾಗಿದ್ದಾನೆ. ಕಾರಿನ ಹಿಂದುಗಡೆ ಬರುತ್ತಿದ್ದ ಕ್ವಾಲಿಸ್ ವಾಹನವನ್ನು ತಪಾಸಣೆ ನಡೆಸಿದಾಗ ಎರಡು ದನ ಹಾಗೂ ಒಂದು

ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಕಟ್ಟಿ ತುಂಬಿಸಿರುವುದು ಕಂಡುಬಂದಿದೆ. ಕ್ವಾಲಿಸ್ ವಾಹನದಲ್ಲಿದ್ದ ಆರೋಪಿಗಳಾದ ರಫೀಕ್, ರಜಾಕ್ ಪಿ. ಹಾಗೂ ನಾಗೇಶ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ ಐ ನಂದಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

ಎರಡು ವಾಹನ ಹಾಗೂ ಜಾನುವಾರು ಸಹಿತ ಒಟ್ಟು 4.15 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು