ಮಂಗಳೂರು: ಮೆಹಂದಿ ಶಾಸ್ತ್ರದ ದಿನವೇ ನಾಪತ್ತೆಯಾಗಿದ್ದ ಮದುಮಗ, ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ ಐತಪ್ಪ ಶೆಟ್ಟಿ ಅವರ ಪುತ್ರ ಕಿಶನ್ ಶೆಟ್ಟಿ ಬಳ್ಳಾರಿಯಲ್ಲಿ ಭಾನುವಾರ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ .
ಭಾನುವಾರ ಮಧ್ಯಾಹ್ನ ತನ್ನ ತಂಗಿಗೆ ಮೊಬೈಲ್ ಸಂದೇಶ ಕಳುಹಿಸಿರುವ ಕಿಶನ್ ಶೆಟ್ಟಿ ನಾನು ಬಳ್ಳಾರಿಯಲ್ಲಿದ್ದೇನೆ. ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.ಈ ಮೂಲಕ ಪುತ್ರನ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ತಿಳಿದು ಬಂದಿದೆ.
ಮೇ31ರಂದು ರಾತ್ರಿ ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲೆಂದು ಹೋಗಿದ್ದ ಕಿಶನ್ ಶೆಟ್ಟಿ ಆ ಬಳಿಕ ನಾಪತ್ತೆಯಾಗಿದ್ದರು. ಈತ ಭಾನುವಾರ ಮಧ್ಯಾಹ್ನ ಸಹೋದರಿ ಮೊಬೈಲ್ಗೆ ಸಂದೇಶ ಕಳುಹಿಸಿದ್ದಾನೆ.