News Karnataka Kannada
Friday, April 26 2024
ಮಂಗಳೂರು

ಅಳಪೆಯಲ್ಲಿ ಪಾದಚಾರಿಗೆ ಬಸ್‌ ಡಿಕ್ಕಿ, ಸಾವು

ನಾಗರಬಾವಿ ಹೊರ ವರ್ತುಲ ರಸ್ತೆಯಲ್ಲಿ ಓರ್ವ ವ್ಯಕ್ತಿ ಬೈಕ್‌ನಲ್ಲಿ ಹೋಗುವಾಗ ಆಯ ತಪ್ಪಿ ರಸ್ತೆಗೆ ಬಿದ್ದಾಗ ಖಾಸಗಿ ಬಸ್ ಹರಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
Photo Credit : IANS

ಮಂಗಳೂರು: ರಸ್ತೆಯನ್ನು ದಾಟುತ್ತಿದ್ದ ವ್ಯಕ್ತಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಮಂಗಳೂರು ನಗರದ ಅಳಪೆಯಲ್ಲಿ ನಡೆದಿದೆ. ಸುಧಾಕರ ಶೆಟ್ಟಿ ಎಂಬುವವರಿಗೆ ಬಸೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಸಂಚಾರ ದಕ್ಷಿಣ ಪೊಲೀಸರು ತಿಳಿಸಿದ್ದಾರೆ.

ಪಂಪ್ ವೆಲ್ ನಿಂದ ಪಡೀಲ್ ಕಡೆಗೆ ಹಾದು ಹೋಗಿರುವ ರಸ್ತೆಯನ್ನು ಸುಧಾಕರ ಶೆಟ್ಟಿ ದಾಟುತ್ತಿರುವಾಗ ಖಾಸಗಿ ಬನ್ನೊಂದು ಡಿಕ್ಕಿ ಹೊಡೆದಿದೆ. ಅಪಘಾತ ಎಸಗಿದ ಆರೋಪಿಯು ಸ್ಥಳದಿಂದ ಬಸ್ ಸಮೇತ ಪರಾರಿಯಾಗಿದ್ದು, ಸ್ಥಳೀಯರು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು.

ಹೆಚ್ಚಿನ ಚಿಕಿತ್ಸೆಗೆ ಸುಧಾಕರ ಶೆಟ್ಟಿಯ ಪುತ್ರ ಸುಶ್ರಾಥ್ ಶೆಟ್ಟಿ ವೆನ್ಸಾಕ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರೀಕ್ಷಿಸಿದ ವೈದ್ಯರು ಸುಧಾಕರ ಶೆಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು