ಮಂಗಳೂರು: ರಾಜ್ಯಾದ್ಯಂತ ಕಾವೇರಿ ನೀರಿಗಾಗಿ ಹೊರಾಟ ನಡೆಯುತ್ತಿದ್ದು, ಕರ್ನಾಟಕದ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾವೇರಿ ನೀರಿ ಈ ಭಾಗದ ಜನತೆ ಪ್ರತಿಭಟಿಸುವುದಿಲ್ಲ ಎನ್ನುವ ಅಪವಾದವಿದೆ.
ಸರ್ವಕಾಲೇಜು ವಿದ್ಯಾರ್ಥಿ ಸಂಘ ಕಳೆದ ಅನೇಕ ವರ್ಷದಿಂದ ಕರ್ನಾಟಕ ರಾಜ್ಯಾದ್ಯಂತ ಜಲ, ನೆಲ, ಭಾಷೆಯ ಅಳತೆಗಾಗಿ ಹೋರಾಟವಾದಾಗ ವಿದ್ಯಾರ್ಥಿ ಶಕ್ತಿ. ಅದರಲ್ಲಿ ಭಾಗವಹಿಸಿರುತ್ತದೆ, ನೇತ್ರಾವತಿಯ ಉಳಿವಿಗಾಗಿ ಈ ಸಂಘ ಬೃಹತ್ ಹೋರಾಟ ನಡೆಸಿರುವ ಇತಿಹಾಸ ಜನತೆಯ ಮುಂದೆ ಇದೆ. ಇಂದು ಕಾವೇರಿ ವಿವಾದ ಮೂಲಕ ಅನ್ನ ಕೊಡುವ ರೈತರಿಗೆ ಸಮಸ್ಯೆ ಆಗಿರುವುದರಿಂದ ಹೋರಾಟದಲ್ಲಿ ಭಾಗವಹಿಸುವ ಮತ್ತು ಹೋರಾಟಕ್ಕೆ ಬೆಂಬಲ ನೀಡುವುದು ಸರ್ವಕಾಲೇಜು ವಿದ್ಯಾರ್ಥಿ ಸಂಘದ ಮತ್ತು 4 ಭಾಗದ ಜನತೆಯ ಆದ್ಯ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಕಾವೇರಿ ನೀರಿನ ಉಳಿವಿಗಾಗಿ ಹೋರಾಟಕ್ಕೆ ಸರ್ವಕಾಲೇಜು ವಿದ್ಯಾರ್ಥಿ ಸರವು ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಪೂರ್ಣವಾಗಿ ಬೆಂಬಲ ನೀಡುತ್ತಿದೆ. ಈ ದೃಷ್ಟಿಯಲ್ಲಿ ಸೆ 30 ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನ ಮಿನಿ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಲಿದೆ ಎಂದು ಸಂಘದ ರಾಜ್ಯ ಸಲಹೆಗಾರರಾದ ದಿನಕರ್ ಶೆಟ್ಟಿ, ರಾಜ್ಯಾಧ್ಯಕ್ಷ ತುಷಾರ್ ಕದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.