News Kannada
Saturday, September 23 2023
ಮಂಗಳೂರು

ರೋಟರಿ ಕ್ಲಬ್ ಸಹಯೋಗದಲ್ಲಿ ಡಯಾಲಿಸೀಸ್ ಯಂತ್ರಗಳು ಪುತ್ತೂರು ಸರಕಾರಿ ಆಸ್ಪತ್ರೆಗೆ ಹಸ್ತಾಂತರ

Dialysis machines donated in association with Rotary Club handed over to Puttur Government Hospital
Photo Credit : News Kannada

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಇಲೈಟ್ ಮತ್ತು ಅಮೇರಿಕಾದ ಫ್ಲೋರಿಡಾದಲ್ಲಿರುವ ರೋಟರಿ ಕ್ಲಬ್ ನ್ಯೂ ಟಾಂಪಾನೂನ್ ಅವರ ಸಹಯೋಗದಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ 6 ಅತ್ಯಾಧುನಿಕ ಡಯಾಲಿಸೀಸ್ ಯಂತ್ರಗಳನ್ನು ಜೂನ್ 9 ರಂದು ಹಸ್ತಾಂತರಿಸಲಾಯಿತು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯಂತ್ರಗಳನ್ನು ಅಧಿಕೃತವಾಗಿ ಆಸ್ಪತ್ರೆಗೆ ಸೇರ್ಪಡೆಗೊಳಿಸಿದರು.

ಸುಮಾರು 57 ಲಕ್ಷ ವೆಚ್ಚದ 6 ಅತ್ಯಾಧುನಿಕ ಯಂತ್ರಗಳನ್ನು ರೋಟರಿ ಕ್ಲಬ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಈಗಾಗಲೇ 7 ಡಯಾಲಿಸೀಸ್ ಯಂತ್ರಗಳಿದ್ದು, ಅದರೂ 90 ರೋಗಿಗಳು ಹೆಚ್ಚುವರಿ ಲಿಸ್ಟ್ ನಲ್ಲಿದ್ದಾರೆ.

ರೋಟರಿ ಕ್ಲಬ್ ನೀಡಿದ ಝ ಯಂತ್ರಗಳು ಬಡ ರೋಗಿಗಳಿಗೆ ಸಹಾಯ ಮಾಡಲಿದೆ ಎಂದ ಅವರು ಪುತ್ತೂರು ಸರಕಾರಿ ಆಸ್ಪತ್ರೆ ಜನಸಾಮಾನ್ಯನಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಅಲ್ಲಿನ ಸಮಸ್ಯೆಗಳಿಗೂ ನಾನು ಸ್ಪಂದಿಸುವ ಕಾರ್ಯ ಮಾಡಿದ್ದೇನೆ. ಆಸ್ಪತ್ರೆಗೆ ಬೇಕಾದ ಗೈನೋಕಾಲಜಿ, ಟೆಕ್ನೀಶಿಯನ್, ಅನಸ್ತೇಶಿಯಾ ಪೋಸ್ಟ್ ಗಳನ್ನು ಕೂಡಲೇ ನೀಡುವಂತೆ ಆರೋಗ್ಯ ಸಚಿವ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲದೆ ಡಯಾಲಿಸೀಸ್ ಕೇಂದ್ರವನ್ನು ನಿರ್ವಹಿಸುತ್ತಿರುವ ಸಂಸ್ಥೆಯ ಟೆಂಡರ್ ಕಾಲಮಿತಿ ಮುಕ್ತಾಯಗೊಂಡಿದ್ದು, ಮರು ಟೆಂಡರ್ ಪ್ರಕ್ರಿಯೆ ಸದಸ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದರು.

ಈ ಬಾರಿ ಬಿಡ್ ದಾರರು ಒಂದು ಡಯಾಲಿಸೀಸ್ ಗೆ 1400 ರೂಪಾಯಿಗಳ ಬಿಡ್ ಮಾಡಿದ್ದು, ಇದರಲ್ಲಿ ಡಯಾಲಿಸೀಸ್ ಯಂತ್ರ, ಆರ್.ಒ ಕೇಂದ್ರ ಎಲ್ಲವನ್ನೂ ಸಂಸ್ಥೆಯೇ ಪೂರೈಸುತ್ತದೆ. ಆದರೆ ಪ್ರಸ್ತುತ ರಾಜ್ಯದಲ್ಲಿ 220 ಡಯಾಲಿಸೀಸ್ ಘಟಕಗಳಿದ್ದು, ಈ ಎಲ್ಲದರಲ್ಲೂ ಡಯಾಲಿಸೀಸ್ ಯಂತ್ರಗಳನ್ನೂ ಸರಕಾರದ ವತಿಯಿಂದಲೇ ಅಳವಡಿಸಲಾಗಿದೆ. ಈ ಹಿನ್ನಲೆಯಲ್ಲಿ ಯಂತ್ರಗಳು ಇರುವ ಕೇಂದ್ರದಲ್ಲಿ 900 ರೂಪಾಯಿಗಳನ್ನು ಸೀಮಿತಗೊಳಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

See also  ಮದುವೆಯಾದ ಆರು ತಿಂಗಳಲ್ಲೇ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ತಲಾಖ್‌ ನೀಡಿ ಹೊರದಬ್ಬಿದ ಪತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು