News Kannada
Monday, February 26 2024
ಮಂಗಳೂರು

ಮಂಗಳೂರು: ಮದರ್ ತೆರೇಸಾ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ

District-level essay and painting competition as part of Mother Teresa's Death Anniversary
Photo Credit :

ಮಂಗಳೂರು: ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಇಂದು(20-08-2022) ನಗರದ ಮಿಲಾಗ್ರಿಸ್ ಪ.ಪೂ.ಕಾಲೇಜ್ ನಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ನಿರೀಕ್ಷೆಗೂ ಮೀರಿ ಜಿಲ್ಲೆಯಾದ್ಯಂತ 78 ಶಿಕ್ಷಣ ಸಂಸ್ಥೆಗಳಿಂದ 480 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 520ರಷ್ಟು ಸ್ಪರ್ಧಾಳುಗಳು ಭಾಗವಹಿಸುವ ಮೂಲಕ ದಾಖಲೆ ಮೆರೆದಿರುವುದು ವಿಶೇಷವಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಕಾರ್ಯಕ್ರಮ ಸಂಯೋಜಕರಾದ ಫಾ.ರೂಪೇಶ್ ಮಾಡ್ತಾರವರು, ನಿಷ್ಕಲ್ಮಶ ಮನಸಿನಿಂದ ಮಾನವೀಯ ಸೇವೆಗೈದು ಜಗತ್ತಿನ ಮಹಾತಾಯಿಯೆಂದೇ ಗುರುತಿಸಿಕೊಂಡ ಸಂತ ಮದರ್ ತೆರೇಸಾರವರ ಚಿಂತನೆಗಳು, ವಿಚಾರಧಾರೆಗಳು ಇಂದಿನ ಯುವ ಪೀಳಿಗೆಗೆ ತೀರಾ ಅತ್ಯಗತ್ಯವಾಗಿದೆ.ದ್ವೇಷ ತುಂಬಿದ ನಾಡಿನಲ್ಲಿ ಪ್ರೀತಿ ಹಂಚಲು,ಮಾನವೀಯತೆ ಬೆಳಗಲು ಮದರ್ ತೆರೇಸಾ ಪ್ರಬಲ ಅಸ್ತ್ರವಾಗಿ ಮೂಡಿಬರಬೇಕಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ರೋಗಿಗಳ ಆರೈಕೆ ಮಾಡುವ ಮೂಲಕ ನೊಂದವರ, ಶೋಷಿತರ ಧ್ವನಿಯಾದ ಮದರ್ ತೆರೇಸಾರವರು ತನ್ನ ಮಾನವೀಯ ಸೇವೆಗಳಿಂದಾಗಿ ಜಗತ್ಪ್ರಸಿದ್ಧರಾದರು.ಅಂತಹ ಮಾನವೀಯ ಮೌಲ್ಯದ ಮಹಾತಾಯಿ ಬಹುತ್ವ ಭಾರತದ ಉಸಿರು ಎಂದು ಹೇಳಿದರು.

ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಹೈಸ್ಕೂಲ್, ಕಾಲೇಜ್ ಮತ್ತು ಸಾರ್ವಜನಿಕ ವಿಭಾಗಗಳಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಚಾರ ವೇದಿಕೆಯ ನಾಯಕರಾದ ಸುಶೀಲ್ ನೊರೋನ್ಹಾ, ಡೋಲ್ಫಿ ಡಿಸೋಜ, ಡಾ.ಕ್ರಷ್ಣಪ್ಪ ಕೊಂಚಾಡಿ, ಯೋಗೀಶ್ ಜಪ್ಪಿನಮೊಗರು, ಸುಮತಿ ಹೆಗ್ಡೆ,, ಮುನೀರ್ ಕಾಟಿಪಳ್ಳ, ಶಾಂತಿ ಡಾಯಸ್, ಡಯಾನ ಡಿಸೋಜ, ಪ್ಲೋರಿನ್ ಡಿಸೋಜ, ಫ್ಲೇವಿ ಡಿಸೋಜ, ಫ್ಲೇವಿ ಕ್ರಾಸ್ತಾ, ಜಾಸ್ಮಿನ್ ಡಿಸೋಜ, ಅಸುಂತ ಡಿಸೋಜ, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ರೇವಂತ್ ಕದ್ರಿ,ಶಾಹಿದ್,ಸ್ಟಾನಿ ಕ್ರಾಸ್ತಾ, ಅಲ್ತಾಫ್ ತುಂಬೆ, ವೀಣಾ ಶೆಟ್ಟಿ, ಶಾಲಿನಿ ರೈ,ಭವಾನಿ ಜೋಗಿ, ಶಾದಿಲ್, ನೂಮನ್, ಜುನೈದ್, ಫಾಹಿಸ್, ರಾಝಿಕ್ ಮುಂತಾದವರು ಹಾಜರಿದ್ದರು.

ಸೆಪ್ಟೆಂಬರ್ 9ರಂದು ನಗರದ ಪುರಭವನದಲ್ಲಿ ಜರುಗಲಿರುವ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಈ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ. ವಿಧ್ಯಾರ್ಥಿ ಯುವಜನರು,ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು