News Karnataka Kannada
Wednesday, April 24 2024
Cricket
ಮಂಗಳೂರು

ಬೆಳ್ತಂಗಡಿ: ಜಿಲ್ಲೆಯಲ್ಲಿ ಒಟ್ಟು 58 ಕಡೆ ಆನೆ ಗಣತಿ

Elephant census from May 17 to 19
Photo Credit : News Kannada

ಬೆಳ್ತಂಗಡಿ: ಮೂರು ದಿನಗಳ ಆನೆ ಗಣತಿ ದಕ ಜಿಲ್ಲೆಯಲ್ಲೂ ಆರಂಭವಾಗಿದೆ. ಮೇ 17 ರಿಂದ 19ರ ತನಕ ಇದು ನಡೆಯುತ್ತದೆ ಐದು ವರ್ಷಗಳಿಗೊಮ್ಮೆ ನಡೆಯುವ ಆನೆಗಣತಿ ಅರಣ್ಯ ಇಲಾಖೆ ನೇತೃತ್ವದಲ್ಲಿ ಜರಗುತ್ತದೆ. ಇದಕ್ಕಾಗಿ ಇಲಾಖೆಯಿಂದ ಪೂರ್ವ ಸಮೀಕ್ಷೆಗಳನ್ನು ನಡೆಸಲಾಗಿದ್ದು ಸ್ಥಳಗಳನ್ನು ಗುರುತಿಸಲಾಗಿದೆ.

ಆನೆಗಣತಿ ಕಾರ್ಯದಲ್ಲಿ ಮೊದಲ ದಿನ ನೇರಗಣತಿ ನಡೆಯುತ್ತದೆ. ಅಂದರೆ ಗಣತಿ ನಡೆಸುವ ತಂಡ, ಕಾಡಾನೆಗಳ ಜಾಡು ಹಿಡಿದು 15 ಕಿಮೀ. ಕ್ರಮಿಸಬೇಕು. ಈ ವೇಳೆ ಆನೆಗಳು ಕಂಡು ಬಂದರೆ ಅವುಗಳ ಫೋಟೋ ಕ್ಲಿಕ್ಕಿಸಿ ಅದು ಗಂಡು ಅಥವಾ ಹೆಣ್ಣು ಎಂದು ಗುರುತಿಸಿದರೆ ಉತ್ತಮ. ಎರಡನೇ ದಿನ ಅರಣ್ಯದಲ್ಲಿ ಸಂಚಾರ ನಡೆಸಿ ಕಾಡಾನೆಗಳು ತಿರುಗಾಡುವ ಪ್ರದೇಶಗಳನ್ನು ಗುರುತಿಸಬೇಕು. ಆನೆಗಳ ಲದ್ದಿ, ಪರಿಸರದಲ್ಲಿ ಸಂಚರಿಸಿರುವ ಹೆಜ್ಜೆ ಗುರುತು,ಮರ- ಪೊದೆಗಳನ್ನು ಆನೆಗಳು ಪುಡಿಗೈದಿರುವುದು ಹಾಗೂ ಇನ್ನಿತರ ವಿಚಾರಗಳನ್ನು ಗುರುತಿಸಬೇಕು. ಮೂರನೇ ದಿನ ಕಾಡಿನ ಭಾಗದಲ್ಲಿರುವ ಕೆರೆ, ಹೊಂಡ,ನದಿ ಪರಿಸರಗಳಲ್ಲಿ ಆನೆಗಳು ನೀರು ಕುಡಿಯಲು ಬರುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಕಾದು ಕುಳಿತು ಸಮೀಕ್ಷೆ ನಡೆಸಬೇಕು.

ಇವೆಲ್ಲದರ ಆಧಾರದಲ್ಲಿ ಪರಿಸರದಲ್ಲಿರುವ ಆನೆಗಳ ಸಂಖ್ಯೆಯನ್ನು ಪರಿಗಣಿಸಿ ವರದಿ ತಯಾರಿಸಿ ಇಲಾಖೆಗೆ ಸಲ್ಲಿಸಬೇಕು. ಆನೆಗಣತಿಗಾಗಿ ಇಲಾಖೆ ಸಿಬ್ಬಂದಿಗಳಿಗೆ ಒಂದು ಬಂದೂಕು ಒದಗಿಸುತ್ತದೆ.ಆದರೆ ಗಣತಿಗೆ ಅಗತ್ಯ ಬೇಕಾದ ಬೈನಾಕ್ಯುಲರ್ ಹೆಚ್ಚಿನ ಕಡೆ ಲಭ್ಯವಿಲ್ಲ ಎಂದು ತಿಳಿದು ಬಂದೆ.

ಜಿಲ್ಲೆಯಲ್ಲಿ ಒಟ್ಟು 58 ಕಡೆ
ಜಿಲ್ಲೆಯಲ್ಲಿ ಒಟ್ಟು 58 ಕಡೆಗಳಲ್ಲಿ ಆನೆಗಣತಿ ನಡೆಯುತ್ತಿದೆ. ಬೆಳ್ತಂಗಡಿ ಅರಣ್ಯ ವಲಯದ ಚಾರ್ಮಾಡಿ, ಕಡಿರುದ್ಯಾವರ,ಚಿಬಿದ್ರೆ, ತೋಟತ್ತಾಡಿ, ನೆರಿಯ, ಧರ್ಮಸ್ಥಳ,ಪುತ್ತೂರಿನ ಕನಕನಜಲು,ಪರಪ್ಪ, ಕನ್ನಡ್ಕ ಉಪ್ಪಿನಂಗಡಿ ವಲಯದ ಪಟ್ರಮೆ, ಕಳಂಜ, ಶಿಶಿಲ, ನಿಡ್ಲೆ, ಕೌಕ್ರಾಡಿ, ಹತ್ಯಡ್ಕ, ಶಿಬಾಜೆ-1,2, ಶಿರಾಡಿ-1,2, ಪಂಜವಲಯದ ಏನೇಕಲ್ಲು,ಬಲ್ಯ, ಕುಂತೂರು, ಇಚ್ಲಂಪಾಡಿ, ನೆಲ್ಯಾಡಿ, ಐವತ್ತೊಕ್ಲು, ಅಮರ ಪಡ್ನೂರು, ಕಲ್ಮಡ್ಕ, ಎಣ್ಮೂರು, ಸುಬ್ರಹ್ಮಣ್ಯ ವಲಯದ ಬಿಳಿನೆಲೆ ಪೂರ್ವ, ಪಶ್ಚಿಮ, ಬಾಳಗೋಡು ಉತ್ತರ, ಪಶ್ಚಿಮ ಸಿರಿಬಾಗಿಲು ಪೂರ್ವ ಪಶ್ಚಿಮ,ಮಡಪಾಡಿ ನಾಲ್ಕೂರು ಉತ್ತರ, ದಕ್ಷಿಣ,ಐನೇಕಿದು,ಹರಿಹರ ಪಲ್ಲತಡ್ಕ, ಐತೂರು, ಸುಬ್ರಹ್ಮಣ್ಯ,ಕೋನಾಜೆ,ರೆಂಜಿಲಾಡಿ, ಸುಳ್ಯದ ಅಲೆಟ್ಟಿ ಉತ್ತರ,ದಕ್ಷಿಣ,ಆರಂತೋಡು,ಮಡಪ್ಪಾಡಿ, ಮರ್ಕಂಜ,ಸಂಪಾಜೆ, ತೊಡಿಕಾನ,ಅಜ್ಜಾವರ, ಮಂಡೆಕೋಲು ಉತ್ತರ,ದಕ್ಷಿಣ ಪರಿಸರಗಳಲ್ಲಿ ಓರ್ವ ಡಿ ಆರ್ ಎಫ್ ಒ ಹಾಗೂ ಎರಡರಿಂದ ಮೂರು ಜನ ಗಸ್ತು ಅರಣ್ಯ ಪಾಲಕರ ನೇತೃತ್ವದಲ್ಲಿ ತಂಡ ಆನೆಗಣತಿ ಕಾರ್ಯ ನಡೆಸಿದೆ.

ಬೆಳ್ತಂಗಡಿ ಎಂಟರಿಂದ ಹತ್ತು ಕಾಡಾನೆ ಸಾಧ್ಯತೆ
ಬೆಳ್ತಂಗಡಿ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಎಂಟರಿಂದ ಹತ್ತು ಕಾಡಾನೆಗಳು ಇರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.ಮರಿಯಾನೆ ಸಹಿತ‌ 3 ಆನೆಗಳ ಎರಡು ಗುಂಪು ಹಾಗೂ ಉಳಿದವು ಒಂಟಿ ಸಲಗಗಳು ಎಂದು ಅಂದಾಜಿಸಲಾಗಿದೆ. ಇಲ್ಲಿನ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಡುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಇವು ಮನೆಗಳ ತನಕ ಠಳಾಯಿಸತೊಡಗಿವೆ. ಹಾಡು ಹಗಲೆ ಚಾರ್ಮಾಡಿ ಘಾಟಿ ಪರಿಸರದಲ್ಲಿ ಆಗಾಗ ಒಂಟಿ ಸಲಗ ಇತ್ತೀಚಿನ ದಿನಗಳಲ್ಲಿ ಆಗಾಗ ಕಂಡು ಬರುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಮರಿಯಾನೆಯೊಂದು ಕಡಿರುದ್ಯಾವರ ಗ್ರಾಮದ ತೋಟದಲ್ಲಿ ಬಾಕಿಯಾಗಿ ಬಳಿಕ ತನ್ನ ಗುಂಪನ್ನು ಸೇರಿತ್ತು.

ಕಾಡಾನೆ ಜಾಡು
ಮೇ 17 ರಂದು ಗಣತಿ ಎಂದು ಚಾರ್ಮಾಡಿ ವಲಯದಲ್ಲಿ ಗಣತಿ ನಡೆಸಿದ ತಂಡಕ್ಕೆ ಆ ಪರಿಸರದಲ್ಲಿ ಸ್ವಲ್ಪ ಮುಂಚೆ ಕಾಡಾನೆ ಸಂಚರಿಸಿದ ಕುರುಹುಗಳು ಪತ್ತೆಯಾಗಿದ್ದವು. ಅಲ್ಲದೆ ಸ್ವಲ್ಪ ದೂರದಪ್ರದೇಶದಲ್ಲಿ ಮರಗಳನ್ನು ಪುಡಿ ಮಾಡುವುದು ಸದ್ದು ಕೇಳಿ ಬಂದಿತ್ತು. ತಂಡ ಇದರ ಜಾಡು ಹಿಡಿದು ಹೋದರು ಕಾಡಾನೆ ಕಂಡುಬಂದಿರಲಿಲ್ಲ. ಆದರೆ ಸಂಜೆ ಹೊತ್ತಿಗೆ ಚಾರ್ಮಾಡಿ ಘಾಟಿಯ 7ನೇ ತಿರುವಿನಲ್ಲಿ ಕಾಡಾನೆ ಪ್ರತ್ಯಕ್ಷವಾಗಿತ್ತು.

“ಜಿಲ್ಲೆಯಲ್ಲಿ ಹಲವು ಇಲಾಖೆಯ ತಂಡಗಳನ್ನು ರಚಿಸಿ ಆನೆಗಣತಿ ಕಾರ್ಯ ನಡೆಸಲಾಗುತ್ತಿದೆ. ಸಿಬ್ಬಂದಿಗಳಿಗೆ ಹೆಚ್ಚಿನ ಮುಂಜಾಗ್ರತೆ ವಹಿಸಿ ಗಣತಿ ನಡೆಸಲು ಸೂಚಿಸಲಾಗಿದೆ. ತಂಡಗಳು ಸಲ್ಲಿಸುವ ವರದಿಯ ಆಧಾರದಲ್ಲಿ ಕಾಡಿನಲ್ಲಿ ಇರಬಹುದಾದ ಆನೆಗಳ ಅಂದಾಜು ಸಂಖ್ಯೆ ತಿಳಿದು ಬರಲಿದೆ”
ಡಾ.ವೈ. ದಿನೇಶ್ ಕುಮಾರ್, ಡಿಎಫ್ ಒ, ದಕ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು