News Karnataka Kannada
Friday, April 26 2024
ಮಂಗಳೂರು

ಮೂಲಗೇಣಿದಾರರಿಗೆ ಸರಕಾರ ಶೀಘ್ರವೇ ನ್ಯಾಯ ಒದಗಿಸಲಿ: ಪ್ರತಾಪಸಿಂಹ ನಾಯಕ್

Government should provide justice to the original tenants at the earliest: Pratapsimha Nayak
Photo Credit : News Kannada

ಬೆಳ್ತಂಗಡಿ, ಮೇ 23: ಕರ್ನಾಟಕದಲ್ಲಿ 2012 ರಲ್ಲಿ ಇದ್ದ ಬಿಜೆಪಿ ಸರಕಾರ ಡಾ.ವಿ.ಎಸ್.ಆಚಾರ್ ಅವರ ವಿಶೇಷ ಮುತುವರ್ಜಿಯಲ್ಲಿ ಕರಾವಳಿಯ ಮೂಲಗೇಣಿದಾರರಿಗೆ ಸಂಪೂರ್ಣ ಹಕ್ಕು ನೀಡುವ ಕುರಿತು ಕರ್ನಾಟಕ ಕಾಯ್ದೆ ಸಂಖ್ಯೆ 24/2012 ನ್ನು ರೂಪಿಸಿತ್ತು. ಕರ್ನಾಟಕ ಮೂಲಗೇಣಿ ಅಥವಾ ಒಳಮೂಲಗೇಣಿದಾರರಿಗೆ ಸಂಪೂರ್ಣ ಮಾಲಕತ್ವ ಪ್ರದಾನ ಮಾಡುವ ಅಧಿನಿಯಮ ಸಿಂಧುತ್ವವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಂಖ್ಯೆ 11158/2013 ಮತ್ತು ಇತರ ಅರ್ಜಿಗಳನ್ನು ಹೈಕೋರ್ಟ್ ಗೆ ಮೂಲಿದಾರರು ಸಲ್ಲಿಸಿದ್ದರು .

ರಾಜ್ಯ ಸರಕಾರದ ಈ ಅಧಿನಿಯಮ ಮಾಡುವ ಅಧಿಕಾರವನ್ನು ಪ್ರಶ್ನಿಸಿ, ಮೂಲಿದಾರರು ತಮ್ಮ ಮೂಲಭೂತ ಹಕ್ಕುಗಳಿಗೆ ಇದು ವಿರುದ್ಧವಾಗಿದೆ ಎಂದು ಪ್ರತಿಪಾದನೆ ಮಾಡಿದರು. ಈ ರಿಟ್ ಅರ್ಜಿಗಳನ್ನು ಉಚ್ಚ ನ್ಯಾಯಾಲಯವು ವಜಾಗೊಳಿಸಿ ಸರಕಾರಕ್ಕೆ ಈ ಕುರಿತು ಅಧಿನಿಯಮವನ್ನು ಮಾಡುವ ಅಧಿಕಾರವಿದೆ ಎಂದು ತೀರ್ಪು ನೀಡಿದೆ.

ಇದರಿಂದಾಗಿ ದಶಕಗಳಿಂದ ಸಂಪೂರ್ಣ ಹಕ್ಕಿಗಾಗಿ ಕಾಯುತ್ತಿರುವ ಕರಾವಳಿಯ ಸಾವಿರಾರು ಮೂಲಗೇಣಿದಾರರಿಗೆ ಅಧಿಕಾರ ಸಿಗುವ ದಿಕ್ಕಿನಲ್ಲಿ ದಾರಿ ಸುಗಮವಾಗಿದೆ. ಸರಕಾರ ತಕ್ಷಣವೇ ಕಾರ್ಯಪ್ರವೃತ್ತರಾಗಿ ಮುಂದಿನ ಮೊದಲ ಅಧಿವೇಶನದಲ್ಲಿಯೇ ಪರಿಹಾರಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿರುವ ಮೂಲ ಗೇಣಿದಾರರಿಗೆ ನ್ಯಾಯ ನೀಡುವಲ್ಲಿ ಕಾರ್ಯಪ್ರವೃತ್ತರಾಗಬೇಕು ಮತ್ತು ಯಾವುದೇ ಕಾರಣಕ್ಕೆ ವಿಳಂಬನೀತಿ ಅನುಸರಿಸದೆ ತಕ್ಷಣ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು