News Karnataka Kannada
Friday, March 29 2024
Cricket
ಮಂಗಳೂರು

ಕಡಬ: ಬಹಿರಂಗ ಪ್ರಚಾರ ಮುಗಿದರೂ ಬ್ಯಾನರ್ ಭರಾಟೆ

Kadaba: Even though public campaigning is over, banners are on the rise
Photo Credit : News Kannada

ಕಡಬ: ಬಹಿರಂಗ ಪ್ರಚಾರಕ್ಕೆ ಮೇ.8ರಂದೇ ತೆರೆ ಬಿದ್ದರೂ ಹಲವು ಮತಗಟ್ಟೆಗಳ ಸುತ್ತಮುತ್ತ ಬ್ಯಾನರ್ ಗಳು ರಾರಾಜಿಸುತ್ತಿವೆ. ಕಡಬ ತಾಲೂಕಿನ ಹಲವು ಮತಗಟ್ಟೆಗಳ ಸುತ್ತಮುತ್ತ ವಿವಿಧ ಪಕ್ಷಗಳಿಂದ ಬ್ಯಾನರ್ ಅಳವಡಿಸಿ ಅಭ್ಯರ್ಥಿ ಪರ ಪ್ರಚಾರ ನಡೆಸಲಾಗುತ್ತಿತ್ತು. ಕೆಲವೆಡೆಗಳಲ್ಲಿ ವಿಚಕ್ಷಣ ದಳದವರು ಮತಕೇಂದ್ರಗಳಿಗೆ ತೆರಳಿ ಬ್ಯಾನರ್ ಗಳನ್ನು ತೆರವುಗೊಳಿಸಿದರು.

ಕಡಬದ ಬೂತ್ ಸಂಖ್ಯೆ 90, 91 ರಲ್ಲಿ ಮತದಾರರು ಸಾಲುಗಟ್ಟಿ ನಿಂತಿದ್ದು, ಪಂಚಾಯತ್ ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿಲ್ಲ ಎಂಬ ಆರೋಪ ಕೇಳಿಬಂತು.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಮತಗಟ್ಟೆಯ ಸಮೀಪ ರಸ್ತೆ ಬದಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬೂತ್ ಹಾಕಿ ತಮ್ಮ ಪಕ್ಷದ ಅಭ್ಯರ್ಥಿಗಳ ಬ್ಯಾನರ್ ಅಳವಡಿಸಿದ್ದರು. ಇದನ್ನು ಗಮನಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಹಾಗೂ ನೀತಿ ಸಂಘಟನೆಯ ಪ್ರಮುಖರು ತೆರವುಗೊಳಿಸುವಂತೆ ಸೂಚಿಸಿದರು.

ಇದರಿಂದ ಕೆಲ ಹೊತ್ತು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಿಚಲಿತಗೊಂಡರು. ಈ ನಡುವೆ ಪೊಲೀಸರು ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದು ಬ್ಯಾನರ್ ಗಳು ದಿಢೀರ್ ಕಣ್ಮರೆಯಾಗಿದೆ. ಒಟ್ಟಾರೆ ಮತದಾನ ಒಂದಿಷ್ಟು ಸಣ್ಣಪುಟ್ಟ ಅವ್ಯವಸ್ಥೆ ಹೊರತುಪಡಿಸಿ ಬಿರುಸಿನಿಂದ ಸಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು