ಕೊಯ್ಯೂರು: ಸಿಡಿಲು ಬಡಿದು ಮನೆಗೆ ಹಾನಿ ಮೇ 21ರಂದು ಕೊಯ್ಯೂರು ಗ್ರಾಮದ ಬೀಜದಡಿ ಎಂಬಲ್ಲಿನ ಬಾಬು ಗೌಡರ ಮನೆಗೆ ಸಿಡಿಲು ಬಡಿದು ತೀವ್ರ ತರಹದ ಹಾನಿಯಾಗಿದೆ.
ಸಿಡಿಲಿನ ತೀವ್ರತೆಗೆ ಮನೆಯ ಗೋಡೆ, ನೆಲಗಳಲ್ಲಿ ಬಿರುಕು ಮೂಡಿದ್ದು, ವಿದ್ಯುತ್ ವೈರಿಂಗ್ ಸಂಪೂರ್ಣ ಸುಟ್ಟು ಹೋಗಿದೆ. ಮನೆಗೆ ಗ್ರಾಮಕರಣಿಕರು, ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಭೇಟಿ ನೀಡಿ ನಷ್ಟದ ಪರಿಶೀಲನೆ ನಡೆಸಿದ್ದಾರೆ.