News Kannada
Tuesday, October 03 2023
ಮಂಗಳೂರು

ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮುಂದುವರಿಯಲಿ- ಹರೀಶ್ ಪೂಂಜ

Let us continue to respond to people's problems immediately: Harish Poonja
Photo Credit : By Author

ಬೆಳ್ತಂಗಡಿ: ಕೊರೊನಾ ಕಾಲಘಟ್ಟ, 2019ರ ನೆರೆ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ತಾಲೂಕಿನ ನಾನಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗ ಮಾದರಿಯಾಗಿ ಕೆಲಸ ನಿರ್ವಹಿಸಿದೆ. ಸಮಾಜವನ್ನು ಪ್ರಾಮಾಣಿಕವಾಗಿ ಮುನ್ನಡೆಸಲು ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಇಲಾಖೆಗಳು ಉತ್ತಮವಾಗಿ ಕೆಲಸ ನಿರ್ವಹಿಸಿದ್ದು,ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಾರ್ಯ ಕೈಗೊಳ್ಳುವುದನ್ನು ಮುಂದುವರಿಸಬೇಕು” ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಗುರುವಾರ ಲಾಯಿಲದ ಸಂಗಮ ಸಭಾಭವನದಲ್ಲಿ ತಾಲೂಕು ಆಡಳಿತ ಹಾಗೂ ತಾಪಂ ವತಿಯಿಂದ ನಡೆದ ಮುಂಗಾರು ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು “ಸರ್ವೆ ಇಲಾಖೆಯಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿಯನ್ನು ತಕ್ಷಣ ಮಾಡಬೇಕು, ಪ್ರಕೃತಿ ವಿಕೋಪಗಳಿಗೆ ಸಂಬಂಧಪಟ್ಟ ಇಲಾಖೆಗಳು ತ್ವರಿತ ಪರಿಹಾರ ನೀಡಲು ಸನ್ನದ್ಧವಾಗಿರಬೇಕು. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿರುವ ಮುಂಗಾರು ಸಮಸ್ಯೆಗಳ ಕುರಿತು ಅಧ್ಯಕ್ಷರು,ಪಿಡಿಒಗಳು ಚರ್ಚಿಸಿ ತಕ್ಷಣ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಬೇಕು” ಎಂದು ತಿಳಿಸಿದರು.

ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್ ಮುಖ್ಯ ರಸ್ತೆಗಳ ಚರಂಡಿ ದುರಸ್ತಿ ಇಷ್ಟರೊಳಗೆ ನಡೆಯಬೇಕಿತ್ತು. ಚರಂಡಿಗಳಲ್ಲಿರುವ ತ್ಯಾಜ್ಯ ವಿಲೇವಾರಿ, ದುರಸ್ತಿ ಇನ್ನಿತರ ಅಗತ್ಯ ಕೆಲಸಗಳ ಬಗ್ಗೆ ತಕ್ಷಣ ಗಮನಹರಿಸುವಂತೆ ಸೂಚಿಸಿದರು.

ನಿರ್ವಹಣಾ ಅನುದಾನ ಕೊರತೆ
ಚರಂಡಿ ದುರಸ್ತಿಯ ಟೆಂಡರ್ ಹಾಗೂ ನಿರ್ವಹಣಾ ಅನುದಾನ ಇನ್ನು ಕೂಡ ಬಿಡುಗಡೆಗೊಂಡಿಲ್ಲ.ಈ ಕಾರಣದಿಂದ ಚರಂಡಿ ದುರಸ್ತಿ ಆರಂಭವಾಗಿಲ್ಲ ಎಂಬ ವಿಚಾರ ಸಭೆಯ ಗಮನಕ್ಕೆ ತರಲಾಯಿತು. ಚರಂಡಿ ದುರಸ್ತಿಗೆ ಗುತ್ತಿಗೆದಾರರಲ್ಲಿ ವಿನಂತಿಸಿ ಕೂಡಲೇ ಕಾಮಗಾರಿ ನಡೆಸಲು ಇಂಜಿನಿಯರ್ ಅವರಿಗೆ ಸೂಚಿಸಲಾಯಿತು.

ಅಪಾಯಕಾರಿ ಮರಗಳು
ರಸ್ತೆ ಬದಿ ಇರುವ ಅಪಾಯಕಾರಿ ಮರ ಹಾಗೂ ಮರದ ರೆಂಬೆಗಳನ್ನು ತೆರೆವುಗೊಳಿಸುವ ಕುರಿತು ಆಯಾಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ತಕ್ಷಣ ಪರಿಶೀಲನೆ ನಡೆಸಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂಗೆ ಮಾಹಿತಿ ನೀಡಬೇಕು. ಹಾಗೂ ಇವುಗಳ ತೆರವು ಕಾರ್ಯ ಕೂಡಲೇ ಆರಂಭಿಸುವಂತೆ ಶಾಸಕರು ಸೂಚಿಸಿದರು.

ಆಡಳಿತ ಸನ್ನದ್ಧ
ಮಳೆಗಾಲದ ಸಮಸ್ಯೆಗಳ ತುರ್ತು ನಿರ್ವಹಣೆಗೆ ತಾಲೂಕು ಆಡಳಿತ ಸನ್ನದ್ಧವಾಗಿದ್ದು ಜನ-ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ಕೈಗೊಂಡಿದೆ.ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿರುವಂತೆ ಸೂಚಿಸಲಾಗಿದೆ. ಪ್ರವಾಹ ಉಂಟಾಗಬಹುದಾದ ಗ್ರಾಮಗಳಲ್ಲಿ ನುರಿತ ಈಜುಗಾರರ ಸೇವೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವಘಡಗಳು ಉಂಟಾದ ಸಂದರ್ಭ ತುರ್ತು ಸ್ಪಂದನೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ್ ಸುರೇಶ್ ಕುಮಾರ್ ಹೇಳಿದರು.

ತಾಪಂ ಇಒ ಕುಸುಮಾಧರ ಸ್ವಾಗತಿಸಿದರು. ಸಂಯೋಜಕ ಜಯಾನಂದ ಲಾಯಿಲ ವಂದಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.

ಜೂ. 4 ಕಿಂಡಿ ಅಣೆಕಟ್ಟು ಸ್ವಚ್ಛತೆ ಅಭಿಯಾನ
ಮಳೆಗಾಲದಲ್ಲಿ ನದಿಗಳು ತುಂಬಿ ಹರಿಯುವ ಸಮಯ ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟು ಸಿಲುಕಿ ಹಾನಿ ಉಂಟಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ತಾಲೂಕಿನಾದ್ಯಂತ ಜೂ.4ರಂದು ಪಂಚಾಯಿತಿಗಳು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ನದಿ, ಹೊಳೆಗಳ ಪ್ರದೇಶಗಳಲ್ಲಿರುವ ಮರಮಟ್ಟು,ಕಿಂಡಿ ಅಣೆಕಟ್ಟುಗಳಲ್ಲಿರುವ ಮರ, ಅವುಗಳ ವ್ಯಾಪ್ತಿಯಲ್ಲಿರುವ ಮರದ ರೆಂಬೆಗಳನ್ನು ತೆರೆವುಗೊಳಿಸುವ ಅಭಿಯಾನ ನಡೆಸಲು ಶಾಸಕರು ಸೂಚನೆ ನೀಡಿದರು. ಈ ಬಗ್ಗೆ ಎಲ್ಲಾ ಪಂಚಾಯಿತಿಗಳಿಗೆ ತಕ್ಷಣ ಸೂಚನಾ ಪತ್ರ ನೀಡುವಂತೆ ತಾಪಂ ಇಒ ಅವರಿಗೆ ಸೂಚಿಸಲಾಯಿತು.

See also  ಶಿವಮೊಗ್ಗ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹೆಂಗಸರಿಗೆ ವಂಚನೆ

ಜೂ.5 ಗಿಡ ನೆಡುವ ಅಭಿಯಾನ
ಶಿಬಾಜೆ,ಶಿಶಿಲ,ಹತ್ಯಡ್ಕ,ಕಳೆಂಜ ಮೊದಲಾದ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಈ ಬಾರಿ ಕಾಡ್ಗಿಚ್ಚಿನಿಂದ ಸಾವಿರಾರು ಮರ ಗಿಡಗಳು ನಾಶವಾಗಿವೆ.ಜೂ.5 ವಿಶ್ವ ಪರಿಸರ ದಿನದಂದು ಈ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸ್ಥಳೀಯ ಕಾಲೇಜುಗಳ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಸಹಕಾರದಲ್ಲಿ ಹಣ್ಣಿನ ಗಿಡಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅತೀ ಹೆಚ್ಚು ಗಿಡಗಳನ್ನು ನೆಡುವಂತೆ ತಿಳಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು