News Karnataka Kannada
Friday, April 26 2024
ಮಂಗಳೂರು

ಗ್ಯಾರಂಟಿಗಳ ಅನುಷ್ಠಾನದಲ್ಲಿ ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿ: ಪ್ರತಾಪಸಿಂಹ ನಾಯಕ್‌

Blty
Photo Credit : News Kannada

ಬೆಳ್ತಂಗಡಿ: ಚುನಾವಣೆ ವೇಳೆ ಐದು ಗ್ಯಾರಂಟಿಗಳ ಆಶ್ವಾಸನೆ ನೀಡಿ, ಅವನಿಗೂ ಫ್ರೀ, ಇವನಿಗೂ ಫ್ರೀ, ಎಲ್ಲರಿಗೂ ಫ್ರೀ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈಗ ಯೋಜನೆ ಅನುಷ್ಠಾನದ ಮಾಡುವಾಗ ವಿವಿಧ ಷರತ್ತು ವಿಧಿಸಿ, ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದೆ ಎಂದು ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಆರೋಪಿಸಿದರು.

ಅವರು ಜೂ.೯ರಂದು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಬೆಳ್ತಂಗಡಿ ಆಡಳಿತ ಸೌಧದ ಎದರು ನಡೆದ ರಾಜ್ಯ ಕಾಂಗ್ರೆಸ್ ಸರಕಾರದ ವಿದ್ಯುತ್ ಶುಲ್ಕ ಹೆಚ್ಚಳ ವಿರೋಧಿಸಿ ನಡೆದ ಸಾರ್ವಜನಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಚುನಾವಣೆಯ ವೇಳೆ ಘೋಷಿಸಿದ ಗ್ಯಾರಂಟಿಗಳ ಅನುಷ್ಠಾನದಲ್ಲಿ ರಾಜ್ಯದ ಪ್ರತಿಯೊಬ್ಬ ಸಚಿವರು ಬೇರೆ, ಬೇರೆ ಹೇಳಿಕೆಗಳನ್ನು ನೀಡುತ್ತಿದ್ದು, ಜನತೆ ಗೊಂದಲಕ್ಕಿಡಾಗಿದ್ದಾರೆ. ಚುನಾವಣೆ ಕಳೆದು ಪ್ರಥಮ ಕ್ಯಾಬಿನೆಟ್ ಸಭೆಯಲ್ಲಿ ಯೋಜನೆ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿ ಸಭೆ ಕಳೆದ ಒಂದು ತಿಂಗಳು ಕಳೆದರೂ ಗೊಂದಲ ನಿವಾರಣೆಯಾಗಿಲ್ಲ, ಇವರ ಯೋಜನೆಯ ಕಂಡಿಷನ್ ನೋಡಿದರೆ ರಾಜ್ಯದ ನೂರು ಮಂದಿಯಲ್ಲಿ ೮೦ ಮಂದಿಗೆ ಈ ಯೋಜನೆ ಸಿಗುವುದಿಲ್ಲ ಎಂಬುದು ಜನರಿಗೆ ಗ್ಯಾರಂಟಿಯಾಗಿದೆ. ಸರಕಾರ ಕೊಟ್ಟ ಮಾತನನ್ನು ಉಳಿಸಿಕೊಳ್ಳದಿದ್ದರೆ ನಿಮ್ಮನ್ನು ನಂಬಿ ಓಟು ಕೊಟ್ಟ ಜನರು ಬೀದಿಗಿಳಿದು ಹೋರಾಟ ಮಾಡುವ ದಿನ ದೂರವಿಲ್ಲ ಎಂದು ಹೇಳಿದರು.

ಚುನಾವಣೆ ವೇಳೆ ರಾಜ್ಯದ ಜನರಿಗೆ ೨೦೦ ಯೂನಿಟ್ ವಿದ್ಯುತ್ ಫ್ರೀ ಎಂದು ಭರವಸೆ ಕೊಟ್ಟು ಈಗ ವರ್ಷದ ಸರಾಸರಿ ನೋಡಿ ಎಷ್ಟು ಖರ್ಚು ಮಾಡಿದ್ದೀರಿ ಅಷ್ಟು ಮಾತ್ರ ಫ್ರೀ ಎಂದು ಷರತ್ ಹಾಕುತ್ತಿದ್ದೀರಿ. ಇದನ್ನು ಚುನಾವಣೆ ಸಂದರ್ಭದಲ್ಲೇ ಹೇಳಬೇಕಿತ್ತು. ಸರಕಾರ ತಾನು ಕೊಟ್ಟ ಮಾತಿಗೆ ತಪ್ಪುತ್ತಿದ್ದು, ಇದನ್ನು ರಾಜ್ಯದ ಜನರಿಗೆ ತಲುಪಿಸುವುದು ಪ್ರತಿಪಕ್ಷವಾದ ನಮ್ಮ ಜವಾಬ್ದಾರಿಯಾಗಿದೆ. ನಾವು ಹೋರಾಟದಿಂದ ಮೇಲೆ ಬಂದವರು. ಜನರಿಗೆ ನ್ಯಾಯ ಸಿಗುವವರೆಗೆ ಬಿಜೆಪಿ ಹೋರಾಟ ನಡೆಸಲಿದೆ. ಅಧಿಕಾರದ ಮದದಿಂದ ಜನರನ್ನು ತುಳಿಯುವ ಕೆಲಸ ಮಾಡಿದರೆ, ರಾಜ್ಯದ ಜನರೇ ನಿಮ್ಮನ್ನು ತುಳಿಯುವ ದಿನ ಶೀಘ್ರ ಬರಲಿದೆ, ರಾಜ್ಯ ಸರಕಾರದ ವಚನ ಭ್ರಷ್ಟತೆ, ದ್ವೇಷದ ರಾಜಕಾರಣ, ವಿದ್ಯುತ್ ಶುಲ್ಕ ಹೆಚ್ಚಳ, ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ವಿರೋಧಿ ನೀತಿಯನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಬೆಳ್ತಂಗಡಿ ಉಸ್ತುವಾರಿ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ರಾಜ್ಯದ ನಕಲಿ ಕಾಂಗ್ರೆಸ್‌ನ ನಕಲಿ ಗಾಂಧಿಯ, ಐದು ಘೋಷಣೆಗಳು ಈಗ ನಕಲಿ ಗ್ಯಾರಂಟಿ ಕಾರ್ಡ್ ಎಂದು ಸಾಬೀತಾಗಿದೆ ಎಂದು ತಿಳಿಸಿದರು.

೨೦೦ ಯೂನಿಟ್ ವಿದ್ಯುತ್ ಫ್ರೀ ಎಂದು ಹೇಳಿದವರು ಈಗ ವಿದ್ಯುತ್ ದರವನ್ನು ಹೆಚ್ಚಿಸಿದ್ದಾರೆ, ರೂ.೫೦೦ ಬರುತ್ತಿದ್ದ ನಿಗದಿತ ಶುಲ್ಕ ಈಗ ರೂ.೧೩೦೦ಕ್ಕೆ ಏರಿಕೆಯಾಗಿದೆ. ರಾಜ್ಯದ ಕಾಂಗ್ರೆಸ್ ಸರಕಾರ ಕರ್ನಾಟಕ ರಾಜ್ಯದ ಹಣಕಾಸಿನ ಸ್ಥಿತಿಯನ್ನು ಪಾಕಿಸ್ತಾನ, ಶ್ರೀಲಂಕಾದ ಈಗಿನ ಸ್ಥಿತಿಗೆ ತಲುಪಿಸುವ ಸಾಧ್ಯತೆ ಇದೆ. ಈ ಗ್ಯಾರಂಟಿಗಳ ವಿಷಯದಲ್ಲಿ ನೂರಕ್ಕೆ ನೂರು ಕಾಂಗ್ರೆಸ್ ನಾಯಕರುಗಳ ನಡುವೆಯೇ ಅಂತರ್ಯುದ್ಧವಾಗಲಿದೆ. ಐದು ಗ್ಯಾರಂಟಿಗಳು ಕಾಂಗ್ರೆಸ್‌ನ್ನು ನುಂಗಿ ಬಿಡಲಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ವಹಿಸಿ, ಸ್ವಾಗತಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಸಂಘಟನಾ ವಿಭಾಗದ ಕಾರ್ಯದರ್ಶಿ ಪ್ರಸಾದ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ಗೌಡ, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ದನ್, ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ಪ್ರಶಾಂತ ಪಾರೆಂಕಿ, ನ.ಪಂ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ಜಯಂತ ಗೌಡ ಗುರಿಪಳ್ಳ, ಮಹಾಬಲ ಗೌಡ, ಸದಾನಂದ ಪೂಜಾರಿ, ಕೊರಗಪ್ಪ ಗೌಡ, ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ಸೀತಾರಾಮ ಬೆಳಾಲು, ದಿನೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸಿನ ನಾಯಕರು ಅಧಿಕಾರದ ಮದದಿಂದ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಮಾತನಾಡುವವರಿಗೆ ತಮ್ಮ ವಯಸ್ಸಿನ ತೂಕ ಬೇಕು, ಆಡಿದ ಮಾತನ್ನು ಸಾಧಿಸಿ ತೋರಿಸಬೇಕು, ಪ್ರತಿಕಾರಂಗವನ್ನು ಭ್ರಷ್ಟ ಎಂದು ಹೇಳುವ ಅಧಿಕಾರ ಇವರಿಗೆ ಕೊಟ್ಟವರು ಯಾರು? ಬಾಯಿಗೆ ಬಂದ ಹಾಗೆ  ಹೇಳಿದನ್ನು ಹಾಕಬೇಕು, ಇವರು ಹೇಳಿದ್ದನ್ನು ಹಾಕುವವರು ಒಳ್ಳೆಯವರು, ಹಾಕದಿದ್ದವರು ಕೆಟ್ಟವರು. ನಾವು ಆಡುವ ಮಾತಿಗೆ ಆಧಾರ ಬೇಕು, ಬಾಯಿಗೆ ಬಂದ ಹಾಗೆ ಮಾತನಾಡಿ ನಂತರ ಕೋರ್ಟಿನಲ್ಲಿ ಕ್ಷಮೆ ಕೇಳಿ, ಸದಸ್ಯತನ ಕಳೆದುಕೊಂಡು ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸುವವರು ಇವರ ನಾಯಕರು. ನೀವು ಹಿಂದೂಗಳ ಭಾವನೆ ಗೌರವಿಸಿ, ಈ ರಾಷ್ಟ್ರಕ್ಕಾಗಿ ಹೋರಾಟ ಮಾಡಿದವರನ್ನು ಗೌರವಿಸಿ. – ಪ್ರತಾಪಸಿಂಹ ನಾಯಕ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು