News Kannada
Friday, March 01 2024
ಮಂಗಳೂರು

ಮಂಗಳೂರು: ಆ.6 ಶನಿವಾರ ಅರೆಭಾಷೆ ಪದಕೋಶ ಬುಡುಗಡೆ ಕಾರ್ಯಕ್ರಮ

Mangaluru, Aug 06: Arebhasha Dictionary Budugade programme to be held on Saturday, August 06
Photo Credit : News Kannada

ಮಂಗಳೂರು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್, ಮಂಗಳೂರು ಸಿಐಎಸ್-ಎ2ಕೆ, ಬೆಂಗಳೂರು ಇವರ ಸಹಯೋಗದೊಂದಿಗೆ ಅರೆಭಾಷೆ ಪದಕೋಶ ಬುಡುಗಡೆ ಕಾರ್ಯಕ್ರಮ ಆ.06 ಶನಿವಾರದಂದು ಬೆಳಗ್ಗೆ 10 ಗಂಟೆಗೆ ಸಾನಿಧ್ಯ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರಿನಲ್ಲಿ ನಡೆಯಲಿದೆ.

ಈ ಸಭಾ ಕಾರ್ಯಕ್ರಮದ ಸಭಾಧ್ಯಕ್ಷ‌ರಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ‌ರಾದ ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆ ವಹಿಸಲಿದ್ದಾರೆ.

ಪದಕೋಶದ ಬುಡುಗಡೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈ ಅವರು ನೆರವೇರಿಸಲಿದ್ದಾರೆ.

ಪದಕೋಶದ ಬಗ್ಗೆ ಮಾತನಾಡಲಿರುವವರು ಮದ್ರಾಸ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ‌, ಪ್ರೊ. ಚೆ. ರಾಮಸ್ವಾಮಿ. ರೆ.ಫಾ. ಮೆಲ್ವಿನ್ ಜೋಸೆಫ್ ಪಿಂಟೊ ಎಸ್ ಜೆ ಇವರಿಂದ ಆಶೀರ್ವಾದದ ಮಾತುಗಳು ಹಾಗೆಯೇ ಸಂತ ಅಲೋಸಿಯಸ್‌ ಕಾಲೇಜು (ಸ್ವಾಯತ್ತ) ಮಂಗಳೂರು ಪ್ರಾಂಶುಪಾಲ‌ರಾದ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್ ಜೆ ಇವರು ಶುಭ ನುಡಿಗಳನ್ನಾಡಲಿದ್ದಾರೆ.

ಕಾರ್ಯಕ್ರಮದ ಸಂಯೋಜಕರಾಗಿ ಡಾ. ವಿಶ್ವನಾಥ ಬದಿಕಾನ ಮತ್ತು  ಭರತೇಶ ಅಲಸಂಡೆಮಜಲು ವಹಿಸಲಿದ್ದಾರೆ.

ಈ ದಿನದ ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ

  • ಮದ್ಯಾಹ್ನ 1.30 ರಿಂದ 2.10 ರವರೆಗೆ ಅಳಿವಿನಂಚಿನ ಸಣ್ಣ ಭಾಷೆಗ ಮತ್ತೆ ಡಿಕ್ಷನರಿ ವಿಷಯದ ಬಗ್ಗೆ ಮದ್ರಾಸು ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ‌ ಪ್ರೊ. ಚೆ. ರಾಮಸ್ವಾಮಿ ಮತ್ತು ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು, ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಹಾಲಿಂಗ ಭಟ್ ಇವರಿಂದ ವಿಚಾರಗೋಷ್ಠಿ ನಡೆಯಲಿದೆ.
  • ಮದ್ಯಾಹ್ನ 2.15 ರಿಂದ 2.55 ರವರೆಗೆ ಅಳಿವಿನಂಚಿನ ಭಾಷೆ ಮತ್ತೆ ಯೋಜನೆಗ ವಿಷಯದ ಬಗ್ಗೆ ವಿಕಿಮೀಡಿಯ ಫೌಂಡೇಶನ್ ವಾಷಿಂಗ್ಟನ್ ಡಿಸಿ, ಯುಎಸ್ಎ ಉದ್ಯೋಗಿ  ತನ್ವಿರ್ ಹಸನ್ ಮತ್ತು ನಾಲಂದ ಕಾಲೇಜು ಪರ್ಲ, ಕಾಸರಗೋಡು ಪ್ರಾಂಶುಪಾಲ‌ ಡಾ. ಕಿಶೋರ್ ಕುಮಾರ್ ರೈ ಶೇಣಿ ಇವರಿಂದ ವಿಚಾರಗೋಷ್ಠಿ ನಡೆಯಲಿದೆ.
  • ಮದ್ಯಾಹ್ನ 3 ರಿಂದ 3.45 ರವರೆಗೆ ಡಿಜಿಟಲೀಕರಣ, ಮುಕ್ತ ಜ್ಞಾನ, ಯೂನಿಕೋಡ್ ಮತ್ತೆ ಅರೆಭಾಷೆ ವಿಷಯದ ಬಗ್ಗೆ ಸಂಚಿ ಫೌಂಡೇಶನ್ ಮತ್ತೆ ಸಂಚಯ ಬೆಂಗಳೂರು,  ಓಂಶಿವಪ್ರಕಾಶ್ ಮತ್ತು ಗಣಕ ವಿಜ್ಞಾನ ವಿಭಾಗ, ಕನರಾ ಕಾಲೇಜು, ಮಂಗಳೂರು ಸಹಾಯಕ ಪ್ರಾಧ್ಯಾಪಕಿ ಬಜತಾ ಶೆಟ್ಟಿ ಇವರಿಂದ ವಿಚಾರಗೋಷ್ಠಿ ನಡೆಯಲಿದೆ.
  • ಮದ್ಯಾಹ್ನ 3.45 ರಿಂದ 4 ರವರೆಗೆ ವಿಕಿಪೀಡಿಯ ಸಾಧನೆಗ ತುಳು ವಿಕಿಪೀಡಿಯ ಏಳನೇ ವರ್ಸದ ಸಂಬ್ರಮದ
    ಪ್ರಸ್ತಾವನೆಯನ್ನು ಡಾ. ವಿಶ್ವನಾಥ ಬದಿಕಾನ ಮಾಡಲಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು