News Kannada
Saturday, February 24 2024
ಮಂಗಳೂರು

ಮಂಗಳೂರು: ಬೆಂಗಳೂರಿನ ಬಾಲಕಿ ಕಡೆಗೂ ಪಣಜಿಯಲ್ಲಿ ಪತ್ತೆ

Bengaluru girl finally found in Panaji
Photo Credit : News Kannada

ಮಂಗಳೂರು: ಮಾರ್ಕ್ ಕಡಿಮೆ ಬಂತೆಂದು ಬೆಂಗಳೂರಿನ ಮನೆ ಬಿಟ್ಟು ಮಂಗಳೂರಿಗೆ ಬಂದು ನಾಪತ್ತೆಯಾಗಿದ್ದ 14ವರ್ಷದ ಬಾಲಕಿ ಭಾರ್ಗವಿ ಗೋವಾದಲ್ಲಿ ಪತ್ತೆಯಾಗಿದ್ದಾಳೆ.

ಗೋವಾದ ಪಣಜಿಯಲ್ಲಿ ಭಾರ್ಗವಿ ಪತ್ತೆಯಾಗಿದ್ದಾಳೆ ಎಂದು ಆಕೆಯ ಕುಟುಂಬ ಸದಸ್ಯರು ದೃಢಪಡಿಸಿದ್ದಾರೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಭಾರ್ಗವಿ 14ವರ್ಷ ಸೋಮವಾರ ಸಂಜೆ ಟ್ಯೂಷನ್ಗೆಂದು ಹೋದವಳು ನಾಪತ್ತೆಯಾಗಿದ್ದಳು .ಬಳಿಕ ಬಸ್ ಮೂಲಕ ಮಂಗಳೂರಿಗೆ ಬಂದಿದ್ದು ಮರುದಿನ ಮುಂಜಾನೆ 3ಗಂಟೆ ವೇಳೆಗೆ ಮಂಗಳೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು.

ನಸುಕಿನಲ್ಲಿಯೇ ಆಟೊರಿಕ್ಷಾದಲ್ಲಿ ಪಣಂಬೂರು ಬಳಿಯ ಮುಕ್ಕ ಬೀಚ್ ಗೆ ಹೋಗಿದ್ದಳು ಅನಂತರ ಆಟೊದಲ್ಲಿಯೇ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದಳು ಎನ್ನಲಾಗಿತ್ತು .ಆ ನಂತರ ಎಲ್ಲಿ ಹೋಗಿದ್ದಾಳೆಂದು ಮಾಹಿತಿ ಇರಲಿಲ್ಲ .ಮಂಗಳೂರು ಪೊಲೀಸರು ಕೂಡ ಹುಡುಕಾಟ ನಡೆಸಿದ್ದರು ಬುಧವಾರ ಸಂಜೆ ವೇಳೆಗೆ ಪಣಜಿ ಪೊಲೀಸರು ಹುಡುಗಿಯನ್ನು ಪತ್ತೆ ಮಾಡಿದ್ದಾರೆ ಸದ್ಯಕ್ಕೆ ಹುಡುಗಿ ಪಣಜಿ ಪೊಲೀಸರ ವಶದಲ್ಲಿದ್ದಾಳೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು